ಕುಂತೂರು ಶಾಲಾ ಕಟ್ಟಡ ಕುಸಿತ ಪ್ರಕರಣ- ಶಾಸಕಿ ಭಾಗೀರಥಿ ಮುರುಳ್ಯ ಭೇಟಿ -ಹೊಸ ಶಾಲಾ ಕೊಠಡಿಗೆ ಸರಕಾರಕ್ಕೆ ಮನವಿ

0

ಆಲಂಕಾರು: ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕುಸಿತಗೊಂಡ ಹಿನ್ನೆಲೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶಾಲಾ ಅಡಳಿತ ಮಂಡಳಿ ಹಾಗು ಶಿಕ್ಷಕರ ಜೊತೆ ಮಾತುಕತೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿ ಅವರು ಈ ಘಟನೆಯಿಂದ ನನಗೆ ತುಂಬಾ ಬೇಸರ ಆಗಿದೆ.ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸರಕಾರಿ ಶಾಲಾ ಕಟ್ಟಡಗಳು ತುಂಬಾ ಹಳೆಯದಾಗಿದ್ದು ಈ ಬಗ್ಗೆ ಶಿಕ್ಷಣ ಸಚಿವರಿಗೆ ಹಾಗು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಸರಕಾರದಲ್ಲಿ ಹಣ ಇಲ್ಲದ ಕಾರಣ ಒಟ್ಟು 90 ಲಕ್ಷ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಲು ತಿಳಿಸಿದ್ದರು.ನಂತರ ಅದನ್ನು 30 ಲಕ್ಷಕ್ಕೆ ಕ್ರೀಯಾ ಯೋಜನೆ ಮಾಡಲು ತಿಳಿಸಿದ್ದರು ಅದರಲ್ಲಿ ಕುಂತೂರು ಸರಕಾರಿ ಶಾಲೆಗೆ ರೂ 1,50,000 ಹಣದಲ್ಲಿ ದುರಸ್ತಿ ಕಾಮಗಾರಿ ನಡೆಸುವ ಸಂಧರ್ಭದಲ್ಲಿ ಈ ದುರ್ಘಟನೆ ನಡೆದಿದೆ.

75 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸರಕಾರಕ್ಕೆ ಮನವಿ ಮಾಡುತ್ತೇನೆ.ಇಲ್ಲಿದ್ದ ಶಿಥಿಲಗೊಂಡ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಆಗುವ ತನಕ ಮಕ್ಕಳಿಗೆ ಸರಕಾರಿ ಅಥವಾ ಖಾಸಗಿಯವರ ಕೊಠಡಿಯಲ್ಲಿ ತರಗತಿ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.ಈ ಸಂಧರ್ಭದಲ್ಲಿ ಪೆರಾಬೆ ಗ್ರಾ.ಪಂ ಅಧ್ಯಕ್ಷರಾದ ಸಂಧ್ಯಾ,ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್ ಬಾಣಬೆಟ್ಟು ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿ.ಪಂ ಇಂಜಿನಿಯರ್ ಭರತ್ ಭೇಟಿ
ಶಾಸಕರು ಹಾಗು ಸಹಾಯಕ ಆಯುಕ್ತರ ಸೂಚನೆಯಂತೆ ಆ.28 ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಅಸಿಸ್ಟೆಂಟ್ ಇಂಜಿನಿಯರ್ ಭರತ್ ಭೇಟಿ ನೀಡಿ ಶಾಲಾ ಕೊಠಡಿ ಗುಣಮಟ್ಟವನ್ನು ಪರಿಶೀಕ್ಷಿಸಿ ಕುಂತೂರು ಸರಕಾರಿ ಶಾಲಾ ಕೊಠಡಿಯು ಶಿಥಿಲ ವ್ಯವಸ್ಥೆಯಲ್ಲಿದ್ದು ಇಲ್ಲಿ ತರಗತಿ ನಡೆಸಲು ಅಸಾಧ್ಯ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿಯನ್ನು ನೀಡುವುದಾಗಿ ತಿಳಿಸಿದರು.ಸ್ಥಳದಲ್ಲಿ ಕಡಬ ತಾ.ಪಂ ಇ.ಓ ಭವಾನಿ ಶಂಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here