





ಷಷ್ಠಿ ಮಹೋತ್ಸವವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ-ಕೇಶವ ಪೂಜಾರಿ


ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್ 25, 26 ರಂದು ನಡೆಯುವ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಅ.27 ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.





ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಷಷ್ಠಿ ಮಹೋತ್ಸವವು ಜರಗಲಿದೆ. ಈ ಸಂದರ್ಭದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದ ಅರ್ಚಕರಾದ ವೆಂಕಟೇಶ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಷಷ್ಠಿ ಮಹೋತ್ಸವದಲ್ಲಿ ಶಾಸಕ ಅಶೋಕ್ ರೈ ಭಾಗಿ
ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳರವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರದ ಷಷ್ಠಿ ಮಹೋತ್ಸವದ ಜಾತ್ರೋತ್ಸವ ಭಕ್ತಾಧಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ನವೆಂಬರ್ 24 ರಂದು ಹಸಿರು ಹೊರೆಕಾಣಿಕೆ ಜರಗಲಿದ್ದು ಭಕ್ತರು ಇದಕ್ಕೆ ಸಹಕರಿಸಬೇಕಾಗಿದೆ. ಜಾತ್ರೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ ಜರಗಲಿದ್ದು ಶಾಸಕರಾದ ಅಶೋಕ್ ಕುಮಾರ್ ರೈರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯರ ನಿರ್ದೇಶನದಂತೆ ನಡೆಯುವ ಷಷ್ಠಿ ಜಾತ್ರೋತ್ಸವವನ್ನು ಪ್ರತಿಯೋರ್ವರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದರು.
ಶ್ರೀ ಕ್ಷೇತ್ರದ ಅರ್ಚಕರಾದ ರಮೇಶ್ ಭಟ್, ಅನಂತ ಪದ್ಮನಾಭ, ಯೋಗೀಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ರೇಖಾ ಯಶೋಧರ ಗೌಡ ಬಿ.ಎಸ್ , ಸೂರಪ್ಪ ಗೌಡ, ಚಂದ್ರಶೇಖರ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್, ಗುಮಾಸ್ತ ಭರತ್, ರಘುನಾಥ್ ಪೂಜಾರಿ ಸಹಿತ ಹಲವರು ಭಕ್ತರು ಉಪಸ್ಥಿತರಿದ್ದರು.







