ಕುಂಬ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ವಲಯದ ಸಮೃದ್ಧಿ ಹಾಗೂ ಬೆಳಕು ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವನ್ನು ಆಚರಿಸಲಾಯಿತು.

ಕೇಂದ್ರದ ಸದಸ್ಯೆ ಬದ್ರುನ್ನಿಸ ಪರ್ಪುಂಜರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ನೆರವೇರಿಸಿ ಮಹಿಳೆಯರ ಸಾಧನೆ, ಆಸಕ್ತಿ, ಜ್ಞಾನವಿಕಾಸದಿಂದ ಅವರಲ್ಲಿ ಅದ ಬದಲಾವಣೆ ಅವರಲ್ಲಿ ಹೊಸ ಉತ್ಸಾಹವನ್ನು ತಂದಿದೆ ಈ ಉತ್ಸಾಹ ಹೀಗೆ ಇರಲಿ ಕೇಂದ್ರವನ್ನು ಇನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿ ಎಂದು ಹೇಳಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಶೋಭಾ ಚರಣ್ ರಾಜ್ ಪರ್ಪುಂಜ ರವರು ಮಹಿಳೆಯರ ಶಿಕ್ಷಣ ಇವರನ್ನು ಸ್ವಾವಲಂಬಿಯಾಗಿಸುತ್ತದೆ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾಣದಲ್ಲಿ ಮಹಿಳೆ ಮುಖ್ಯ ಪಾತ್ರ ವಹಿಸುತ್ತಾಳೆ. ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯರು ಇಂದು ಸರಿ ಸಮಾನರು ಎಂದರು. ಜನಜಾಗೃತಿಯ ವಲಯಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸಂಸ್ಕಾರದಿಂದ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಎಂದರು. ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.ಸಭೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಸುಧಾಕರ್ ರೈ ಕುಂಬ್ರ ,ವಲಯಾಧ್ಯಕ್ಷ ಎಸ್ ಮಾಧವ ರೈ ಕುಂಬ್ರ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಜನ ಜಾಗೃತಿ ಸಮಿತಿಯ ಗ್ರಾಮಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮಾಜಿ ವಲಯಾಧ್ಯಕ್ಷ ರಾಧಾಕೃಷ್ಣ ರೈ ತುಂಡುಬೈಲು, ವಲಯದ ಮೇಲ್ವಿಚಾರಕಿ ಮೋಹಿನಿ ಎಸ್, ಒಕ್ಕೂಟದ ಪದಾಧಿಕಾರಿ ರಾಮಕೃಷ್ಣ ನಾಯ್ಕ್ ಮುಡಾಲ, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಶಶಿಕಲಾ ಸ್ವಾಗತಿಸಿದರು, ಕೇಂದ್ರದ ಸದಸ್ಯೆ ಚಿತ್ರಾಕ್ಷಿ ವಂದಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here