ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯಿಂದ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸುದಾನ ಸ್ಪೋಟ್ಸ್ ಕ್ಲಬ್ ಸಾಮೆತ್ತಡ್ಕ ಪುತ್ತೂರು ಇಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಾಲವರ್ಗದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.
ಬಾಲವರ್ಗದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಅದ್ಯಾನ್.ಆರ್(ಶ್ರೀ ರಂಜಿತ್ ಮತ್ತು ವತ್ಸಲ ದಂಪತಿ ಪುತ್ರ) , ಜಶ್.ಎಚ್.ಬಿ(ಶ್ರೀ ಹೇಮಚಂದ್ರ ಬಿ. ಮತ್ತು ಶುಭಶ್ರೀ ದಂಪತಿ ಪುತ್ರ) , ಪ್ರಣವ ಹೆಬ್ಬಾರ್(ಶ್ರೀ ಕೆ ರಾಜೇಂದ್ರ ಹೆಬ್ಬಾರ್ ಮತ್ತು ಸುಧಾ ದಂಪತಿ ಪುತ್ರ) , 8ನೇ ತರಗತಿಯ ಇಶಾನ್.ಕೆ(ಶ್ರೀ ಕೆ.ನಾರಾಯಣ ಮೂರ್ತಿ ಮತ್ತು ಪ್ರೇಮಲತಾ ದಂಪತಿ ಪುತ್ರ ), ನಿಧಿತ್ ಗೌಡ(ಶ್ರೀ ದಿಲೀಪ್ ಕುಮಾರ್.ಕೆ ಮತ್ತು ನಮಿತಾ.ಬಿ.ಎಸ್ ದಂಪತಿ ಪುತ್ರ), ಮತ್ತು ವಿಸ್ತಾರ್ ರೈ(ಶ್ರೀ ತಾರನಾಥ ಡಿ ಮತ್ತು ಕವಿತಾ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ಆರ್ ಅನ್ವಿಕರಾಜ್(ಶ್ರೀ ರಾಜೇಶ್.ಎ ಮತ್ತು ಅಶ್ವಿನಿ ರಾಜೇಶ್ ದಂಪತಿ ಪುತ್ರಿ) , 8ನೇ ತರಗತಿಯ ಡಿ. ಮೊನಾಲಿ ಗೌಡ(ಶ್ರೀ ದಿನೇಶ್.ಟಿ ಮತ್ತು ಸಂಗೀತ ದಂಪತಿ ಪುತ್ರಿ), 7ನೇ ತರಗತಿಯ ಚಾರ್ವಿ ನಾಯಕ್(ಶ್ರೀ ಅನಿಲ್ ನಾಯಕ್ ಮತ್ತು ಸಂಗೀತ ದಂಪತಿ ಪುತ್ರಿ) , 8ನೇ ತರಗತಿಯ ಕೃತಿಕಾ.ಬಿ(ಶ್ರೀ ಬಿ.ಪ್ರಕಾಶ್ ವಾಗ್ಲೆ ಮತ್ತು ಸುಲೋಚನ.ಎಸ್ ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಿಶೋರ ವರ್ಗದ ಬಾಲಕಿಯರ ತಂಡ ವಿಭಾಗದಲ್ಲಿ 10ನೇ ತರಗತಿಯ ಸಮನ್ಮಿತಾ.ಕೆ (ಶ್ರೀ ಕಿಶೋರ್ ಕುಮಾರ್ ಮತ್ತು ರೂಪಶ್ರೀ ದಂಪತಿ ಪುತ್ರಿ), 9ನೇ ತರಗತಿಯ ಕೀರ್ತನಾ ವರ್ಮ(ಶ್ರೀ ಪ್ರತಾಪ ಸಿಂಹ ವರ್ಮ ಮತ್ತು ವೀಣಾ ಕುಮಾರಿ ದಂಪತಿ ಪುತ್ರಿ), 9ನೇ ತರಗತಿಯ ಯೋಗಿತಾ(ಶ್ರೀ ಚೆನ್ನಪ್ಪ ಗೌಡ ಮತ್ತು ಯಶಕಲಾ ದಂಪತಿ ಪುತ್ರಿ), ಮತ್ತು 9ನೇ ತರಗತಿಯ ಯಶಿಕಾ.ಎಸ್ (ಶ್ರೀ ಸುರೇಶ್.ಎನ್ ಮತ್ತು ಸುಪ್ರಿಯಾ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾರೆ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.