ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣದ (Rotary Swarna) ವತಿಯಿಂದ ಆ.29ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವೇದಮೂರ್ತಿ ಸಂದೀಪ್ ಕಾರಂತ್ ಕಾರ್ಪಾಡಿ ಇವರು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕುರಿತು ಹಾಗೂ ಜಗತ್ತಿಗೆ ಶ್ರೀಕೃಷ್ಣನ ಉಪದೇಶದ ಕುರಿತು ಧಾರ್ಮಿಕ ಉಪನ್ಯಾಸವನ್ನು ನೀಡಿದರು. ನಂತರ ಸಂದೀಪ್ ಕಾರಂತ್ ಕಾರ್ಪಾಡಿ ದಂಪತಿಯನ್ನು ಕ್ಲಬ್ ವತಿಯಿಂದ ಗೌರವಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181 ವಲಯ 5ರ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ ವಲಯ ಸೇನಾನಿಗಳಾದ ವೆಂಕಟರಮಣ ಗೌಡ ಕಳುವಾಜೆ, ರಫೀಕ್ ದರ್ಬೆ, ಕ್ಲಬ್ ಜಿ.ಎಸ್.ಆರ್., ಚಿದಾನಂದ ಬೈಲಾಡಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ.ಎಂ ಅಶ್ರಫ್, ರಶ್ಮಿ ಸಂದೀಪ್ ಕಾರಂತ್ ಸಹಿತ ಹಲವಾರು ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರೋಟರಿ ಸ್ವರ್ಣ ಅಧ್ಯಕ್ಷ ಸುರೇಶ್ ಪಿ. ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ಉಮೇಶ್ ಎಂರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಸೆನೋರಿಟಾ ಆನಂದ್ ವಾರದ ವರದಿಯನ್ನು ಮಂಡಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ ವಂದಿಸಿದರು.