ಕ್ಲಸ್ಟರ್ ಪ್ರತಿಭಾ ಕಾರಂಜಿ :ವಿವೇಕಾನಂದ ಕ.ಮಾ ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪುತ್ತೂರು ಇದರ ವತಿಯಿಂದ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗಕ್ಕೆ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಕಿರಿಯರ ವಿಭಾಗದಲ್ಲಿ :
ಆಯುಷ್ ಬಿ – ಪ್ರಥಮ (ಚಿತ್ರಕಲೆ), ಮಾತಂಗಿ – ಪ್ರಥಮ(ಭಕ್ತಿಗೀತೆ), ಭಾರ್ಗವ ರಾಮ ಯು- ಪ್ರಥಮ (ಆಶುಭಾಷಣ), ಸನ್ಮಯ ಭಟ್ ವೈ – ದ್ವಿತೀಯ(ಧಾರ್ಮಿಕ ಪಠಣ – ಸಂಸ್ಕೃತ), ಅಣಿಮಾ ಬಿ-ದ್ವಿತೀಯ(ದೇಶಭಕ್ತಿಗೀತೆ), ಪೂರ್ವಿ ಎಂ-ದ್ವಿತೀಯ (ಅಭಿನಯ ಗೀತೆ) ಸ್ಥಾನ ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಹಿರಿಯರ ವಿಭಾಗದಲ್ಲಿ :
ಶ್ರೀಕೃಷ್ಣ ಬಿ – ಪ್ರಥಮ (ಆಶುಭಾಷಣ), ಅದ್ವಿತ್ ಜಿ-ಪ್ರಥಮ(ಚಿತ್ರಕಲೆ), ಗಾನವಿ ಎನ್-ದ್ವಿತೀಯ (ಪ್ರಬಂಧ ರಚನೆ), ಗರಿಮಾ ಬಿ- ದ್ವಿತೀಯ (ಭಕ್ತಿಗೀತೆ)ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here