ಪುತ್ತೂರು : ಗ್ರಾಮ ಆಡಳಿತ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸೇರ ಬಯಸೋ ಅಭ್ಯರ್ಥಿಗಳಿಗೆ ರಾಜ್ಯ ಸರಕಾರವು ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವೆಂಬ ನಿಯಮ ಜಾರಿಗೆ ತಂದಿರುವುದರಿಂದಾಗಿ ,ಮೇಲಿನ ಹುದ್ದೆ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ನೇಮಕಾತಿಯ ಕಡ್ಡಾಯವಾಗಿ ಕನ್ನಡ ಪರೀಕ್ಷೆ ಎದುರಿಸಬೇಕಾಗಿದ್ದು , ಇದಕ್ಕೆ ಪೂರಕವಾಗಿ , ನುರಿತ ತಂಡದ ಮೂಲಕ ತರಬೇತಿಯನ್ನು ನೀಡಲು ಹೆಸರಾಂತ ವಿದ್ಯಾಮಾತಾ ಅಕಾಡೆಮಿ ಮುಂದಾಗಿದೆ.
ಈಗಾಗಲೇ ವಿ.ಎ.ಓ ಅಥವಾ ಪಿ.ಡಿ.ಓ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಗೆ ಅನ್ವಯಿಸುವಂತೆ ಪೂರ್ವ ಸಿದ್ದತಾ ತರಬೇತಿಯನ್ನು ಅಕಾಡೆಮಿ ಆಯೋಜಿಸಿದ್ದು, ಕಡ್ಡಾಯ ಕನ್ನಡ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಲು ವಿದ್ಯಾಮಾತಾ ಅಕಾಡೆಮಿಯು ಅವಕಾಶ ಕಲ್ಪಿಸಿದೆ.
ಸೆ. 1 ರಂದು ನಡೆಯಲಿರುವ ವಿಶೇಷ ಕಾರ್ಯಗಾರವು ಬೆಳಗ್ಗೆ 10 ರಿಂದ ಸಂಜೆ 3ರ ವರೆಗೆ ನಡೆಯಲಿದ್ದು, ಈ ತರಬೇತಿ ಕಾರ್ಯಗಾರಕ್ಕೆ ಹಾಜರಾಗಲು ಇಚ್ಛಿಸುವವವರು ಈ ಕೂಡಲೇ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಿ:
9148935808 , 96204 68869 , 9448527606.