





ನೆಲ್ಯಾಡಿ: ಮೆಸ್ಕಾಂ ಉಪ್ಪಿನಂಗಡಿ ಶಾಖೆ ವ್ಯಾಪ್ತಿಯ ಗೋಳಿತ್ತೊಟ್ಟು ಭಾಗದಲ್ಲಿ ಕಳೆದ 17 ವರ್ಷಗಳಿಂದ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಮೇಲ್ವಿಚಾರಕರಾಗಿ ಭಡ್ತಿಗೊಂಡು ವಿಟ್ಲ ಉಪವಿಭಾಗದ ಮಾಣಿ ಶಾಖೆಗೆ ವರ್ಗಾವಣೆಗೊಂಡಿರುವ ದುರ್ಗಾಸಿಂಗ್ ಅವರಿಗೆ ಗೋಳಿತ್ತೊಟ್ಟು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸನ್ಮಾನ ಆ.30ರಂದು ಗೋಳಿತ್ತೊಟ್ಟಿನಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕರಾದ ಜಯಶ್ರೀಯವರು ಅಭಿನಂದನಾ ಮಾತುಗಳನ್ನಾಡಿ ಶುಭಹಾರೈಸಿದರು. ಘಟಕದ ಪ್ರತಿನಿಧಿ ಜನಾರ್ದನ ಮುರಿಯೇಲು, ನಿಕಟಪೂರ್ವ ಘಟಕ ಪ್ರತಿನಿಧಿ ಮಹೇಶ್, ಆಲಂತಾಯ ಒಕ್ಕೂಟದ ಅಧ್ಯಕ್ಷ ಅಶೋಕ್ ಸಿ.ಬಿ., ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾಲಿನಿಶೇಖರ್ ಪೂಜಾರಿ ಶುಭಹಾರೈಸಿದರು. ಸನ್ಮಾನಿತರಾದ ದುರ್ಗಾಸಿಂಗ್ ಅವರು ಕೃತಜ್ಞತೆ ಸಲ್ಲಿಸಿದರು. ಮಹೇಶ್ ಪಿ., ಸ್ವಾಗತಿಸಿ, ಸೇವಾ ಪ್ರತಿನಿಧಿ ಹೇಮಲತಾ ವಂದಿಸಿದರು.














