ಪುರುಷರಕಟ್ಟೆ ಹಾರ್ಡ್ ವೇರ್ ಅಂಗಡಿಗೆ ಬೆಂಕಿ – ಲಕ್ಷಾಂತರ ರೂಪಾಯಿ ನಷ್ಟ

0

ಪುತ್ತೂರು: ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಆ.31 ರಾತ್ರಿ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

ಪುರುಷರಕಟ್ಟೆಯಿಂದ ಶಾಂತಿಗೋಡು ತೆರಳುವ ರಸ್ತೆಯಲ್ಲಿರುವ ನವೀನ್ ಎಂಬವರ ವಿಶ್ವಾಸ್ ಹಾರ್ಡ್‌ವೇರ್ (Vishwas Hardware) ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಭಸ್ಮವಾಗಿದೆ.

ಸುಮಾರು 8.30ರ ತನಕ ಅಂಗಡಿಯಲ್ಲಿದ್ದ ಮ್ಹಾಲಕರು ಅಂಗಡಿ ಬಂದ್ ಮಾಡಿ ಮನೆಗೆ ತಲುಪಿದ ಕೆಲ ಹೊತ್ತಿನಲ್ಲಿಯೇ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿದೆ ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here