ಶಾಪಿಂಗ್ ವೇಳೆ ಕುಸಿದು ಬಿದ್ದ ಮಾಜಿ ಸಿ.ಎಂ. ಡಿ.ವಿ.ಸದಾನಂದ ಗೌಡರ ಪತ್ನಿ-ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

0

ಬೆಂಗಳೂರು : ಶಾಪಿಂಗ್‌ಗೆ ಬಂದಿದ್ದ ವೇಳೆ ಮಾಜಿ ಮುಖ್ಯಮಂತ್ರಿ, ಡಿ.ವಿ.ಸದಾನಂದ ಗೌಡ ಅವರ (D. V. Sadananda Gowda) ಪತ್ನಿ ಡಾಟಿ ಸದಾನಂದ (Datty Sadananda) ಕುಸಿದು ಬಿದ್ದ ಘಟನೆ ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಐಕಿಯಾ ಮಾಲ್‌ನಲ್ಲಿ (IKEA Mall) ನಡೆದಿದೆ.

ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಡಾಟಿ ಸದಾನಂದಗೌಡ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಕಾರು ಚಾಲಕ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ವಿಷಯ ತಿಳಿದು ಪತ್ನಿಯನ್ನು ನೋಡಲು ಡಿ. ವಿ. ಸದಾನಂದಗೌಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ: ಇನ್ನು, ಸದಾನಂದಗೌಡ ಜೊತೆಗೆ ದಾಸರಹಳ್ಳಿಯ ಶಾಸಕ ಮುನಿರಾಜು ಹಾಗೂ ಸುಜಾತ ಮುನಿರಾಜು ಕೂಡ ಅಸ್ಪತ್ರೆಗೆ ತೆರಳಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಡಾಟಿ ಸದಾನಂದಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here