






ಪುತ್ತೂರು: ಅಕ್ಟೋಬರ್ 21ರಂದು ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾಟ್ಯರಂಜಿನಿ ಕಲಾಲಯದಲ್ಲಿ ಗೆಜ್ಜೆ ಪೂಜೆ ಹಾಗೂ ನೃತ್ಯಾರಂಭ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.


ಕಲಾಲಯದಲ್ಲಿ ಸಂಗೀತ ಸೇವೆ ಹಾಗೂ ನೃತ್ಯ ಸೇವೆಯನ್ನು ನೃತ್ಯಗುರುಗಳಾದ ವಿದುಷಿ ಪ್ರಮೀಳಾ ಉದಯ್ ಅವರ ನಿರ್ದೇಶನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಲಾಲಯದ ಅಧ್ಯಕ್ಷರಾದ ನಾರಾಯಣ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.













