ಅಧ್ಯಕ್ಷ: ಕೆ.ಎಂ.ಮಹಮ್ಮದ್, ಪ್ರಧಾನ ಕಾರ್ಯದರ್ಶಿ: ಕೆ.ಕೆ.ಇಸ್ಮಾಯಿಲ್, ಕೋಶಾಧಿಕಾರಿ ಸಲೀಂ ಎಂ.ಕೆ.
ನೆಲ್ಯಾಡಿ: ಖಲಂದರ್ ಷಾ ದಫ್ ಸಮಿತಿ ಕೋಲ್ಪೆ-ನೆಲ್ಯಾಡಿ ಇದರ ವಾರ್ಷಿಕ ಮಹಾಸಭೆ ಆ.30ರಂದು ಕೋಲ್ಪೆ ನೂರಾನಿಯ್ಯ ಮದ್ರಸದಲ್ಲಿ ನಡೆಯಿತು.
ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷರಾದ ಬಿ.ಎಸ್.ಬಾವಾ ತಂಙಳ್ ದುವಾ: ನೆರವೇರಿಸಿದರು. ಖತೀಬರಾದ ಇಸ್ಹಾಕ್ ಪೈಝಿ ಉದ್ಘಾಟಿಸಿದರು. ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಅಧ್ಯಕ್ಷತೆ ವಹಿಸದ್ದರು. ಕೋಲ್ಪೆ ನೂರಾನಿಯ್ಯ ಮದ್ರಸ ಮುಖ್ಯಗರು ಮುಹಮ್ಮದ್ ಹನೀಫ್ ದಾರಿಮಿ, ಕೋಲ್ಪೆ ಖಲಂದರ್ ಷಾ ಅಫ್ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಪೈಝಿ, ಅಧ್ಯಕ್ಷ ಇಕ್ಬಾಲ್ ಕೆ.(ಇಕ್ಕು), ಕೋಶಾಧಿಕಾರಿ ಕೆ.ಕೆ.ಉಸ್ಮಾನ್ ಹಾಜಿ ಉಪಸ್ಥಿತರಿದ್ದರು. ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಗೌರವ ಸಲಹೆಗಾರ ಹಾರಿಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶರೀಫ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ನವಾಝ್ ಮಾಸ್ಟರ್ ಸ್ವಾಗತಿಸಿ, ದಾವೂದ್ ಆರ್.ವಂದಿಸಿದರು.
ನೂತನ ಸಮಿತಿ ರಚನೆ:
ಸಭೆಯಲ್ಲಿ 2024-25ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಎಂ.ಮಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ಇಸ್ಮಾಯಿಲ್ ಹಾಗೂ ಕೋಶಾಧಿಕಾರಿಯಾಗಿ ಸಲೀಂ ಎಂ.ಕೆ.ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೆ.ಯು.ಅಬ್ದುಲ್ ಮಜೀದ್ ಪೈಝಿ, ಉಪಾಧ್ಯಕ್ಷರಾಗಿ ಆಸೀಫ್ ಕೆ.ಕೆ., ಮೊದ್ದೀನ್ ಡ್ರೈವರ್, ಕಾರ್ಯದರ್ಶಿಯಾಗಿ ರಫೀಕ್ ಕೆ.ಇ., ಅಶ್ರಫ್ ಕೆ.ಪಿ., ಸಿದ್ದೀಕ್ ಎಂ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ನೌಸೀರ್ ಕೆ.ಪಿ., ಪತ್ರಿಕಾ ಕಾರ್ಯದರ್ಶಿಯಾಗಿ ಝನೈಪ್, ಲೆಕ್ಕ ಪರಿಶೋಧಕರಾಗಿ ಕೆ.ಎಸ್.ಶರೀಫ್, ಸಮಿತಿ ಸದಸ್ಯರಾಗಿ ದಾವೂದ್ ಆರ್, ಜಮಾಲ್ ಕೆ.ಎಂ., ಸಂಶುದ್ದೀನ್, ಯು.ಅಬ್ಬಾಸ್, ನವಾಝ್ ವೈ, ಹಂಝ(ಅಬ್ಬು), ಯು.ಕೆ.ರಫೀಕ್, ಯು.ಕೆ.ಹಮೀದ್, ಕೆ.ಕೆ.ಶರೀಫ್, ಇರ್ಶಾದ್ ಎಂ., ಸಮೀರ್ ಕೆ.ಕೆ., ಹುಸೈನ್ ಮುಸ್ಲಿಯಾರ್, ಇಕ್ಬಾಲ್ ಇಕ್ಕೂ, ಎಸ್.ಕೆ.ರಜಾಕ್, ಕೆ.ಕೆ.ಉಸ್ಮಾನ್ ಹಾಜಿ, ಆಸೀಫ್ ಹೆಚ್., ರಾಝಿಕ್ ಯು.ಎಂ., ಹುನೈಸ್, ಮಹಮ್ಮದ್ ಕೆ., ಬಿ.ಅಶ್ರಫ್, ಜಾಬೀರ್ ಆಯ್ಕೆಗೊಂಡರು.