ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ 65ನೇ ಮಹಾಸಭೆ

0

ರೂ.478.18 ಕೋಟಿ ವ್ಯವಹಾರ, ರೂ.2,01ಕೋಟಿ ಲಾಭ, ಶೇ.21 ಡಿವಿಡೆಂಡ್

ಪುತ್ತೂರು:ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, 14 ಶಾಖೆಗಳನ್ನು ಒಳಗೊಂಡಿರುವ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.478.18 ಕೋಟಿ ವ್ಯವಹಾರ ನಡೆಸಿ ರೂ.2,01ಕೋಟಿ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಚಿತ್ರ:ಮೂರ್ತಿ ಸ್ಟುಡಿಯೋ ಮುರ


ಸಂಘದ 65ನೇ ಮಹಾಸಭೆಯು ಸೆ.1ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಘವು 15 ಶಾಖೆಗಳ ಮೂಲಕ ಸದಸ್ಯರು ಹಾಗೂ ಸಮಾಜ ಬಾಂಧವರಿಗೆ ಸೇವೆಯನ್ನು ನೀಡುತ್ತಿದೆ. ವರದ ವರ್ಷದಲ್ಲಿ ಸಂಘವು 5,329 ಎ ತರಗತಿ ಸದಸ್ಯರಿಂದ ರೂ.3,34,88,462 ಹಾಗೂ31,547 ಡಿ ತರಗತಿ ಸದಸ್ಯರಿಂದ ರೂ.22,86,375358.75 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. 3,09,58,881.42 ಕ್ಷೇಮ ನಿಧಿ, ರೂ.2,62,16,441.57 ಇತರ ನಿಧಿಗಳಿವೆ. ರೂ.92,85,18,505.03 ಠೇವಣಾತಿಗಳನ್ನು ಹೊಂದಿದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.81,25,41,187 ಸಾಲ ವಿತರಿಸಲಾಗಿದೆ. ರೂ.68,23,91,458.40 ಸಾಲ ವಸೂಲಾತಿಯಾಗಿದೆ. ವರ್ಷಾಂತ್ಯಕ್ಕೆ ರೂ.75,49,19,090.40 ಹೊರಬಾಲಕಿ ಸಾಲಿವಿದ್ದು ರೂ.4,14,19,107 ಸುಸ್ತಿಯಾಗಿರುತ್ತದೆ. ವಾರ್ಷಿಕ ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ನಿರಂತರವಾಗಿ ಎ ವರ್ಗವನ್ನು ಕಾಯ್ದುಕೊಂಡಿದೆ ಎಂದರು.


ಮುಂದಿನ ಯೋಜನೆಗಳು:
ಸಂಘದಲ್ಲಿ 13 ತಿಂಗಳ ಅವಧಿಗೆ ಠೇವಣಿಗೆ ಶೇ.10.50ಶೇ ಬಡ್ಡಿದರ, ಕುಂಬಾರಿಕೆ ಕೈಗಾರಿಕೆಯ ಕುಶಲ ಕರ್ಮಿಗಳಿಗೆ ವಿಶೇಷ ತರಬೇತಿ ಆಯೋಜನೆ, ಮಾರುಕಟ್ಟೆಯ ಅಭಿವೃದ್ಧಿಗಾಗಿ ಮೊಬೈಲ್ ವಾಹನಕ್ಕೆ ಚಾಲನೆ, ಸದಸ್ಯರ ಅನುಕೂಲಕ್ಕಾಗಿ ಆರೋಗ್ಯ ಶಿಬಿರ, ವೃತ್ತಿ ನಿರತ ಕುಂಬಾರ ಕುಶಲ ಕರ್ಮಿಗಳೊಗೆ ಏ.9 ಬಡ್ಡಿದರದಲ್ಲಿ ಸಾಲ ಸೌಲಭ್ಯ, ಆಸಕ್ತರಿಗೆ ನಿರಂತರ ಉಚಿತ ತರಬೇತಿ ನೀಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದರು.


ಸೆ.13 ವಿಟ್ಲ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ನ.13 ಮಾಡೂರು ಶಾಖೆ ಉದ್ಘಾಟನೆ:
ಸಹಕಾರ ಸಂಘದ ವಿಟ್ಲ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದ್ದು ಸೆ.13ರಂದು ಶಾಖೆಯನ್ನು ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ಕೋಟೆಕಾರು ಪಂಚಾಯತ್ ವ್ಯಾಪ್ತಿಯ ಮಾಡೂರಿನಲ್ಲಿ ಸಂಘದ 16ನೇ ಶಾಖೆ ಪ್ರಾರಂಬಿಸಲಾಗುತ್ತಿದ್ದು ಇದರ ಉದ್ಘಾಟನೆಯು ನ.13ರಂದು ನಡೆಯಲಿದೆ. ಅಲ್ಲದೆ ಕಡಬ, ನೆಲ್ಯಾಡಿ ಹಾಗೂ ಮಂಗಳೂರಿನಲ್ಲಿ ಸಂಘದ ಶಾಖೆಗಳನ್ನು ಶೀಘ್ರದಲ್ಲಿ ತೆರೆಯಲಾಗುವುದು ಎಂದು ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದರು.


ಸನ್ಮಾನ:
ನಿವೃತ್ತ ಯೋಧ ಸಂಜೀವ ಕುಲಾಲ್, ಕುಂಬಾರಿಕೆ ವೃತ್ತಿಯಲ್ಲಿ ಸಾಧನೆ ಮಾಡಿದ ಸುಂದರ ಕುಂಬಾರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ರಮೇಶ್, ಸಾಮಾಜಿಕ ಸೇವೆಯಲ್ಲಿ ವೆಂಕಪ್ಪ ಎನ್ ಬಂಜನ್ ಮತ್ತು ರಮೇಶ್ ಮಾಸ್ಟರ್, ಬಾಳಪ್ರತಿಭೆ ಆದ್ಯ ಬಾಳ ಪ್ರತಿಭೆ, ಶೈಕ್ಷಣಿಕ ಕ್ಷೇತ್ರದಲ್ಲಿ ಭವ್ಯ ದಯಾನಂದ್ ಅಟ್ಲೂರು, ಧಾರ್ಮಿಕ ಕ್ಷೇತ್ರದಲ್ಲಿ ದೇವಪ್ಪ ಪಂಜಿಕಲ್ಲು, ಕ್ರೀಡಾ ಕ್ಷೇತ್ರದಲ್ಲಿ ಸಂಗಮ ಜಿ.ಎಚ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


3ಡಿ ಅನಾವರಣ:
ನವೀಕೃತಗೊಳ್ಳಲಿರುವ ಸಂಘದ ಕೇಂದ್ರ ಕಚೇರಿಯ ಕಟ್ಟಡದ ವಿನ್ಯಾಸದ 3ಡಿಯನ್ನು ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ಜಂಟೀ ಆಯುಕ್ತ ಎ.ಎನ್ ರಾಮದಾಸ್ಅ ನಾವರಣಗೊಳಿಸಿದರು.


ತುಂಬಿ ತುಳುಕಿದ ಸಭಾಂಗಣ:
ಸಹಕಾರ ಸಂಘವ 65ನೇ ಮಹಾಸಭೆಯಲ್ಲಿ ಸಭಾಂಗಣವು ಸದಸ್ಯರಿಂದ ತುಂಬಿ ತುಳುಕಿತ್ತು. ಸಭಾಂಗಣ ಕೆಲಭಾಗ ಹಾಗೂ ಮೇಲ್ಬಾಗದಲ್ಲಿರುವ ಆಸನಗಳು ಭರ್ತಿಯಾಗಿ ಹಲವು ಮಂದಿ ಸಭಾಂಗಣದ ಹೊರಗಡೆ ನಿಲ್ಲುವಷ್ಟು ಸಂಖ್ಯೆಯಲ್ಲಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.


ನಿರ್ದೇಶಕರಾದ ಬಿ.ಎಸ್ ಕುಲಾಲ್, ಗಣೇಶ್ ಪಿ., ಶಿವಪ್ಪ ಮೂಲ್ಯ, ಹೆಚ್ ಪದ್ಮಕುಮಾರ್, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ಸಚ್ಚಿದಾನಂದ, ಜಯಶ್ರೀ ಎಸ್, ಶುಭಾ ಎ ಬಂಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬಂದಿಗಳಾದ ಭವ್ಯ ಹಾಗೂ ಯಶಸ್ವಿನಿ ಪ್ರಾರ್ಥಿಸಿದರು. ಉಪಾಧ್ಯಕ್ಷ ದಾಮೋದರ ವಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ ಮೂಲ್ಯ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ನಾಗೇಶ್ ಕುಲಾಲ್ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕುಂಬಾರಿಕೆಯ ಸಂಘದ ತಾಂತ್ರಿ ಸಿಬಂದಿ ರಮೇಶ್ ಕುಲಾಲ್‌ರವರಿಂದ ಪ್ರಾತ್ಯಕ್ಷಿಕೆ ನಡೆಯಿತು. ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಸದಸ್ಯರಿಗೆ ಜ್ಯೂಸ್ ಹಾಗೂ ಚರುಮುರಿ ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here