ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕೋಡಿಂಬಾಡಿ ಬೆಳ್ಳಿಪಾಡಿ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

0

ಸರಕಾರದ ಯೋಜನೆಗಳು ರೈತರ ಮನೆಮನೆಗೆ ಮುಟ್ಟಿಸುವ ಕೆಲಸ ನಡೆಯಬೇಕಾಗಿದೆ..’ -ಅಶೋಕ್ ಕುಮಾರ್ ರೈ

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕೋಡಿಂಬಾಡಿ ಬೆಳ್ಳಿಪಾಡಿ ಶಾಖೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮವು ಆ.31 ರಂದು ಕೋಡಿಂಬಾಡಿಯಲ್ಲಿರುವ ಶಾಖಾ ಕಟ್ಟಡದ ಆವರಣದಲ್ಲಿ ನಡೆಯಿತು.

ನೂತನ ಕಟ್ಟಡದ ಶಿಲಾನ್ಯಾಸವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ನೆರವೇರಿಸಿ ಮಾತನಾಡಿ ಸರಕಾರದ ಯೋಜನೆಗಳು ರೈತರ ಮನೆ ಮನೆಗೆ ಮುಟ್ಟಿಸುವ ಕೆಲಸ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಈಶ್ವರ ಭಟ್ ತಂಡದರವರ ನೇತೃತ್ವದಲ್ಲಿ ನೊಂದವರ ಕಷ್ಟದಲ್ಲಿರುವವರಿಗೆ ರೈತರಿಗೆ ಸಹಾಯ ಹಸ್ತವನ್ನು ಚಾಚಿದ್ದು ಶ್ಲಾಘನೀಯವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕೋಡಿಂಬಾಡಿ ಬೆಳ್ಳಿಪಾಡಿ ಶಾಖೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದು ಇದು ಉತ್ತಮ ರೀತಿಯಲ್ಲಿ ನಿರ್ಮಾಣವಾಗಲಿ ಎಂದು ಹೇಳಿದರು. ಇಂದು ಎಷ್ಟೋ ಬ್ಯಾಂಕುಗಳು ಇದ್ದರೂ ಅದನ್ನು ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಕಳೆದ ಹಲವಾರು ವರ್ಷಗಳಿಂದ ನೊಂದವರ ಕಷ್ಟದಲ್ಲಿರುವ ರೈತರ ಸಹಾಯಕ್ಕಾಗಿ ಶ್ಲಾಘನೀಯ ಕೆಲಸವನ್ನು ಮಾಡುತ್ತಾ ಬಂದಿರುವ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಅವರ ತಂಡದವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಕೂಡ ಇಡೀ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ರೈತರಿಗೆ ಸ್ಪಂದಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ ಎಂದು ಹೇಳಿದ ಅವರು ಇಲ್ಲಿ ನಿರ್ಮಾಣಗೊಳ್ಳುವ ಈ ಕಟ್ಟಡವು ಎಲ್ಲರ ಸಹಕಾರದಿಂದ ಬೆಳೆಯಲಿ ಎಂದರು.

ಆರಂಭದಲ್ಲಿ ಪುರೋಹಿತರಾದ ನವರಾಜು ಭಟ್ ವಿಟ್ಲ ರವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಮಾತನಾಡಿ, ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡವು ದೈವ ದೇವರುಗಳ ಅನುಗ್ರಹದಿಂದ ಉತ್ತಮ ರೀತಿಯಲ್ಲಿ ನಿರ್ಮಾಣಗೊಳ್ಳಲಿ ಈ ಕಟ್ಟಡದ ಮೂಲಕ ಸಮಾಜಕ್ಕೆ ಒಳಿತಾಗಲಿ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರಾಜ್ಯ ಸರಕಾರದ ಕಾನೂನು ಪ್ರಕಾರ ಪ್ರತೀ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಂದ ಕೂಡಿದ ಒಂದು ಶಾಖೆ ಇರಬೇಕಾದದ್ದು ಅದಕ್ಕನುಗುಣವಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಕೋಡಿಂಬಾಡಿ ಬೆಳ್ಳಿಪಾಡಿ ಈ ಶಾಖೆಯ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಮುಂದೆ ಬಂದಿರುವುದು ಶ್ಲಾಘನೀವಾಗಿದೆ. ಈ ಕಟ್ಟಡ ಅಲ್ಪ ಮೊತ್ತದಲ್ಲಿ ನಿರ್ಮಾಣವಾಗಲಿದ್ದು ಶಾಸಕರು ಕೂಡ ಈ ಕೆಲಸ ಕಾರ್ಯದಲ್ಲಿ ಕೈಜೋಡಿಸಿದರೆ ಉತ್ತಮ ರೀತಿಯ ಕಟ್ಟಡವು ನಿರ್ಮಾಣಗೊಳ್ಳಲಿದೆ ಮಾತ್ರವಲ್ಲದೆ ನಬಾರ್ಡ್ ನಿಂದ ಒಂದು ಪರ್ಸೆಂಟ್ ನಲ್ಲಿ ಸಾಲ ಸೌಲಭ್ಯ ಸಿಗುವ ಯೋಜನೆಗಳಿದ್ದು ಅದನ್ನು ಕೂಡ ಪಡೆದುಕೊಂಡು ಒಳ್ಳೆಯ ರೂಪದಲ್ಲಿ ಕಟ್ಟಡ ನಿರ್ಮಾಣಗೊಳ್ಳಲು ಮುಂದೆ ಬರಬೇಕಾಗಿದೆ ಎಂದು ಹೇಳಿದರು

30 ಲಕ್ಷ ರೂ ವೆಚ್ಚದಲ್ಲಿ ಕೋಡಿಂಬಾಡಿ, ಬೆಳ್ಳಿಪಾಡಿ ಶಾಖಾ ಕಟ್ಟಡಕ್ಕೆ ಶಿಲಾನ್ಯಾಸ ಈಶ್ವರ ಭಟ್
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಇಂದು ತಮ್ಮ ಉತ್ತಮ ಸೇವೆಯಿಂದ ಪ್ರತಿಯೊಬ್ಬರ ಮನೆ ಮಾತಾಗಿದ್ದು ಎಲ್ಲರಿಂದ ಪ್ರಶಂಸಲ್ಪಟ್ಟಿದೆ. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕೋಡಿಂಬಾಡಿ ಬೆಳ್ಳಿಪಾಡಿ ಶಾಖಾ ಕಟ್ಟಡಕ್ಕೆ 50 ವರ್ಷ ತುಂಬಿದ್ದು ಇಲ್ಲಿನ ಈ ಶಾಖೆಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಈ ಹಿಂದೆ ತೀರ್ಮಾನಿಸಿ ನಿರ್ಣಯಿಸಿದ್ದು ಅದರಂತೆ ಇದೀಗ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಶೀಘ್ರದಲ್ಲಿ ಈ ಶಾಖ ಕಟ್ಟಡವು ನಿರ್ಮಾಣಗೊಂಡು ಜನಸಾಮಾನ್ಯರಿಗೆ ಸೇವೆ ಒದಗಿಸಲು ಮುಂದೆ ಬರಲಿದೆ. ಮಾತ್ರವಲ್ಲದೆ ಶೀಘ್ರದಲ್ಲೇ ಕೃಷ್ಣ ನಗರದಲ್ಲಿರುವ ಶಾಖೆಯಲ್ಲಿ ಕೂಡ ಹೊಸ ಕಟ್ಟಡದ ನಿರ್ಮಾಣವಾಗಲಿದ್ದು ಈ ಎಲ್ಲಾ ಕೆಲಸ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಶಾಸಕರು ಕೂಡ ಇದರ ಕೆಲಸ ಕಾರ್ಯಗಳಲ್ಲಿ ಕೈಜೋಡಿಸುವಂತೆ ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಾಧಾ ಬಿ. ರೈ ಉಪಾಧ್ಯಕ್ಷರಾದ ರಾಜಶೇಖರ್ ಜೈನ್ ನಿರ್ದೇಶಕರುಗಳಾದ ಸುಭಾಸ್ ನಾಯಕ್, ನ್ಯಾಯವಾದಿ ಜಯಾನಂದ ಕೆ, ಜಯಲಕ್ಷ್ಮಿ ಸುರೇಶ್ ,ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ, ರಾಜು, ಅಲ್ಲದೆ ಪ್ರಮುಖರಾದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಟಿ-ಚೆನ್ನೆಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮುರಳಿದ ರೈ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್, ಮಾರ್ಸಲ್ ವೇಗಸ್ ಪಡೀಲ್, ರಾಮಣ್ಣಗೌಡ ಗುಂಡೋಳೆ, ಮೋಹಿನಿ ಜನಾರ್ಧನ್, ಬಾಬುಗೌಡ ಬಂಡಾರದ ಮನೆ, ಗಣೇಶ್ ರಾಜ್ ಬಿಳಿಯೂರು, ವಿಕ್ರಂ ಶೆಟ್ಟಿ ಅಂತರ, ಜಯಾನಂದ ಕೋಡಿಂಬಾಡಿ, ಕಾರ್ತಿಕ್ ರೈ ಬೆಳ್ಳಿಪಾಡಿ, ಪದ್ಮನಾಭ ಶೆಟ್ಟಿ ರೆಂಜಾಜೆ, ವೇದಾವತಿ ಪಮ್ಮನ ಮಜಲು, ಪ್ರೇಮ ಕುಂಡಾಪು, ವಾರಿಸೇನ ಜೈನ್, ವಾಲ್ಟರ್ ಡಿಸೋಜಾ ಪ್ರಕಾಶ್ ಗೌಡ ನೆಕ್ಕಿಲಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ನಿರಂಜನ ರೈ ಮಠಂತಬೆಟ್ಟು, ಶ್ರೀಧರ ಗೌಡ , ಶಿವ ಮಠಂತಬೆಟ್ಟು, ಸೂರ್ಯ ಅರ್ಥ್ ಮೂವರ್ಸ್ ನ ವಿನಯ್ ಕುಮಾರ್ ಸವಣೂರು, ಸೀನಪ್ಪ ಪೂಜಾರಿ ಮಾವಿನಕಟ್ಟೆ, ರೋಹನ್ ರಾಜ್ ಮಾವಿನಕಟ್ಟೆ, ಗೋಪಾಲ ಪೂಜಾರಿ, ಕೇಶವ ಗೌಡ ಬರಮೆಲು, ಮೋಹಿನಿ ಕೋಡಿಂಬಾಡಿ, ಕೇಶವ ಭಂಡಾರಿ ಕೈಪ, ಯತೀಶ್ ಶೆಟ್ಟಿ, ಸುರೇಶ್ , ಯೋಗೀಶ್ ಸಾಮಾನಿ, ಲಕ್ಷ್ಮಣಗೌಡ ಬೆಳ್ಳಿಪಾಡಿ, ಮೋನಪ್ಪ ಗೌಡ ಪಮ್ಮನಮಜಲ್ ಮೊದಲಾದವರು ಉಪಸ್ಥಿತರಿದ್ದರು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪಕಳ ಕುಂದಾಪು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here