ಕ್ಲಸ್ಟರ್ ಮಟ್ಟದ ವಿವಿಧ ಶಾಲಾ ಮಕ್ಕಳು ಭಾಗಿ
ವೇಣೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಿಟ್ಟಡೆಯಲ್ಲಿ ಕ್ಲಸ್ಟರ್ ಮಟ್ಟದ ವಿವಿಧ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ನೆರವೇರಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ವಹಿಸಿದ್ದರು. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಇಸಿಓ ಚೇತನಾಕ್ಷಿ ,
ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕೆಮ್ಮಾರ ಹಾಗೂ ಅಝೀಝ್ ಬಿ.ಕೆ ಕೆಮ್ಮಾರ, ಎಸ್ಡಿಎಂಸಿ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಝೀಝ್ ಬಿ.ಕೆ ಕೆಮ್ಮಾರ ಮಾತನಾಡಿ ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿ ಪ್ರತಿಭಾ ಕಾರಂಜಿ ಆಯೋಜನೆ ಮಾಡಿದ ನಿಟ್ಟಡೆ ಶಾಲೆಯ ಶಾಲಾಭಿವೃಧ್ದಿ ಸಮಿತಿ ಮತ್ತು ಶಿಕ್ಷಕ ವೃಂದವನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಕುಂಡದಬೆಟ್ಟು ಜುಮಾ ಮಸೀದಿಯ ಧರ್ಮಗುರುಗಳಾದ ಹನೀಫ್ ಸಖಾಫಿ ಬಂಗೇರುಕಟ್ಟೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಇಸಿಓ ಸಿದ್ಲಿಂಗಸ್ವಾಮಿ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ನಿಟ್ಟಡೆ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷೆ ರಜನಿ, ಗ್ರಾಮ ಪಂಚಾಯತ್ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಭರತ್ ರಾಜ್, ದಾನಿಗಳಾದ ನಾರಾಯಣ ಪೂಜಾರಿ, ಬಿಐಆರ್ಟಿ ಜಗದೀಶ್, ಬಜಿರೆ ಕ್ಲಸ್ಟರಿನ ರಾಜೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ರಾಜೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿಟ್ಟಡೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಆರತಿಕಾರ್ಯಕ್ರಮ ಸ್ವಾಗತಿಸಿ,ನಿಟ್ಟಡೆ ಶಾಲೆಯ ಶಿಕ್ಷಕಿ ತಿ ರಜನಿ ವಂದಿಸಿದರು. ಶಾಲೆಯ ಸಹ ಶಿಕ್ಷಕ ಗಣೇಶ್ ಹಾಗೂ ಸ್ಮಿತಾ ನಿರೂಪಿಸಿದರು. ನಿಟ್ಟಡೆ ಶಾಲೆಯ ಎಸ್ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು, ಪೋಷಕರು, ವಿವಿಧ ಶಾಲೆಯ ಅಧ್ಯಾಪಕರು ಹಾಗೂ ಮಕ್ಕಳು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.