ಪುತ್ತೂರು: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೆರೆಹೊರೆ ಗುಂಪು, ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ಪುತ್ತೂರು ನಗರಸಭೆಯಲ್ಲೂ ನೆರೆಹೊರೆ ಸಮಿತಿ ರಚಿಸಬೇಕಾಗಿದ್ದು, ಆಸಕ್ತರು ನಗರಸಭೆ ಕಂದಾಯ ವಿಭಾಗವನ್ನು ಸಂಪರ್ಕಿಸುವಂತೆ ನಗರಸಭೆ(Puttur City Municipal Council) ಪ್ರಕಟಣೆ ತಿಳಿಸಿದೆ.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ತಿದ್ದುಪಡಿ ಅಧಿನಿಯಮ 2020ರಂತೆ ಪುತ್ತೂರು ನಗರಸಭೆ(Puttur City Municipal Council) ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಪ್ರಥಮ ಹಂತದಲ್ಲಿ ಪ್ರತಿ 100 ಮತದಾರರಿಗೆ ಒಂದರಂತೆ ನೆರೆಹೊರೆ ಗುಂಪುಗಳನ್ನು ರಚಿಸಬೇಕಾಗಿದ್ದು, ನಂತರ ಪ್ರತಿಯೊಂದು ಮತಗಟ್ಟೆ ಕೇಂದ್ರದ ಪ್ರದೇಶಕ್ಕೆ ಒಂದು ಪ್ರದೇಶ ಸಭಾ ಮತ್ತು ಪ್ರತಿ ವಾರ್ಡ್‌ಗೆ ಒಂದರಂತೆ ವಾರ್ಡ್ ಸಮಿತಿಗಳನ್ನು ರಚಿಸಬೇಕಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿ ಕನಿಷ್ಟ ಮತದಾರರು ಸಂಖ್ಯೆ 5 ರಿಂದ ಗರಿಷ್ಟ 15 ನೆರೆಹೊರೆ ಸಮಿತಿ ರಚಿಸಬೇಕಾಗಿದ್ದು, ಆಸಕ್ತ ಸ್ವ ಸಹಾಯ ಸಂಘದ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ನಗರಸಭೆ ಕಂದಾಯ ವಿಭಾಗವನ್ನು ಸಂಪರ್ಕಿಸಿ ಪ್ರದೇಶದ ಹೆಸರನ್ನು ಸೂಚಿಸಿ ತಮ್ಮ ಹೆಸರನ್ನು ನೋಂದಾಯಿಸಲು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.