ಪುತ್ತೂರು: ಪುತ್ತೂರು ನಗರಸಭೆಯ (Puttur City Municipal Council) ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದ್ದು, ಬಿಜೆಪಿ (BJP) ನಾಮಪತ್ರ ಸಲ್ಲಿಕೆಗೆ ಕೆಲವೇ ಕ್ಷಣಗಳ ಮೊದಲು ತನ್ನ ಸ್ಪರ್ಧಾಳುಗಳ ಹೆಸರನ್ನು ಘೋಷಣೆ ಮಾಡಿದೆ. ಎಸ್.ಸಿ. ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲೀಲಾವತಿ, ಉಪಾಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸುಂದರ ಪೂಜಾರಿ ಬಡಾವಣೆ ಅವರನ್ನು ಆಯ್ಕೆ ಮಾಡಿಲಾಗಿದೆ.
31 ಸದಸ್ಯರ ನಗರಸಭೆಯಲ್ಲಿ ಬಿಜೆಪಿ ಬಳಿ 25 ಸದಸ್ಯರಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.