ತ್ರೋಬಾಲ್ -ನರಿಮೊಗರು ಸರಸ್ವತಿ ಶಾಲೆಯ ಬಾಲಕರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಈಡನ್ ಗ್ಲೋಬಲ್ ಶಾಲೆ ಬೆಳಂದೂರು ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

10ನೇ ತರಗತಿಯ ವಿಹಾನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ತಂಡದಲ್ಲಿ 10ನೇ ತರಗತಿಯ ವಿಹಾನ್, ಶ್ರೇಯಸ್, ಯಶ್ವಿನ್, ವಿವೇಕ್, 9ನೇ ತರಗತಿಯ ಮೋಕ್ಷಿತ್, ಧನ್ವಿತ್, ಭನ್ನಿತ್, ಜೀವಿತ್, ಸುದೃಶ್, ಜೋಹನ್ ಮತ್ತು 8ನೇ ತರಗತಿಯ ದಿಗಂತ್ ತಂಡದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here