





ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಪೋಷಕರ ಕ್ರೀಡಾಕೂಟ ನ.7ರಂದು ನಡೆಯಿತು.


ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಫಾದರ್ ಮ್ಯಾಕ್ಸಿಮ್ ಡಿಸೋಜಾ, ಸಂತ ಫಿಲೋಮಿನಾ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ಚೈತ್ರಿಕ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಣಿ ಭಗಿನಿ ಲೋರ ಪಾಯಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಕೇಶ್, ಮಾಜಿ ರಕ್ಷಕ ಶಿಕ್ಷಕ ಸಂಘದ ಸದಸ್ಯ ಸುಧಾಕರ ರೈ ಕಟ್ಟಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.






ಈ ಕಾರ್ಯಕ್ರಮದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ರಕ್ಷಕ- ಶಿಕ್ಷಕ ಸಂಘದ ಮಾಜಿ ಸದಸ್ಯ ಸುಧಾಕರ ರೈ ಕಟ್ಟಾವು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ಚೈತ್ರಿಕರವರನ್ನು ಸನ್ಮಾನಿಸಲಾಯಿತು .
ಕ್ರೀಡಾ ಜ್ಯೋತಿಯನ್ನು ಮಾಜಿ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಸುಧಾಕರ ರೈ ಮತ್ತು ತಂಡದವರು ಬೆಳಗಿಸಿದರು. ಫಾದರ್ ಅಶೋಕ್ ರಾಯನ್ ಕ್ರಾಸ್ತಾ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಸಂದೇಶವನ್ನು ನೀಡಿದರು. ಹಗ್ಗ ಜಗ್ಗಾಟ, ಲಗೋರಿ, ಹಾಳೆ ಎಳೆಯುವುದು, ಮನೋರಂಜನ ಆಟಗಳನ್ನು ಆಯೋಜಿಸಿದ್ದರು. ಪೋಷಕರು ಈ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮಾಜಿ ರಕ್ಷಕ ಶಿಕ್ಷಕ ಸಂಘದ ಸದಸ್ಯ ಗುರುರಾಜ್ ಅತಿಥಿಗಳಾಗಿ ಕ್ರೀಡಾಕೂಟದ ಬಗ್ಗೆ ಹಿತನುಡಿಗಳನ್ನು ಆಡಿದರು. ಕ್ರೀಡಾ ಜ್ಯೋತಿಯನ್ನು ನಂದಿಸುವುದರ ಮೂಲಕ ಪೋಷಕರ ದಿನದ ಕ್ರೀಡಾಕೂಟವು ಸಮಾಪ್ತಗೊಂಡಿತು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಈ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಲೋರ ಪಾಯಸ್ ಸ್ವಾಗತಿಸಿ, ಶಿಕ್ಷಕಿ ವಿದ್ಯಾಶ್ರೀ ಕಾರ್ಯ ನಿರೂಪಣೆಗೈದು,ಶಿಕ್ಷಕಿ ಲವೀನಾ ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಕೇಶ್ ವಂದಿಸಿದರು.










