ರಾಮಕುಂಜ: ಔದ್ಯೋಗಿಕ ಕೌಶಲ ತರಬೇತಿ

0

ರಾಮಕುಂಜ: ಪುತ್ತೂರಿನ ’ದ್ವಾರಕಾ ಪ್ರತಿಷ್ಠಾನ’ದ ವತಿಯಿಂದ “ಔದ್ಯೋಗಿಕ ಕೌಶಲ” ಎಂಬ ವಿಷಯದಲ್ಲಿ ತರಬೇತಿ ಶ್ರೀ ರಾಮಕಂಜೇಶ್ವರ ಮಹಾವಿದ್ಯಾಲಯದ ಸೆಮಿನಾರ್ ಹಾಲಿನಲ್ಲಿ ಆ.28ರಂದು ನಡೆಯಿತು.


ತರಬೇತಿ ನೀಡಿದ ಅಮೃತಾ ಶಾನುಭೋಗ್‌ರವರು, ಪದವೀಧರ ವಿದ್ಯಾರ್ಥಿಗಳು ತಮ್ಮ ಆಂತರಂಗಿಕವಾದ ಪ್ರತಿಭೆ ಮತ್ತು ಕೌಶಲಗಳನ್ನು ಗುರುತಿಸಿಕೊಂಡು ಅಭಿವೃದ್ಧಿಪಡಿಸಿಕೊಳ್ಳುವುದರ ಮೂಲಕವಾಗಿ ಉದ್ಯೋಗ ರಂಗಕ್ಕೆ ಪದಾರ್ಪಣೆ ಮಾಡಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಗಣರಾಜ ಕುಂಬ್ಳೆಯವರು ಮಾತನಾಡಿ, ವಿದ್ಯಾರ್ಥಿಗಳು ಅಂಕ ಹಾಗೂ ಉದ್ಯೋಗ ಗಳಿಕೆಯ ಆಸಕ್ತಿಯ ಜೊತೆಗೆ ತಮ್ಮ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯ ಕುರಿತು ಆಸಕ್ತಿ ವಹಿಸಬೇಕು. ವಿವಿಧ ಬಗೆಯ ಕೌಶಲಗಳನ್ನು ಮೈಗೂಡಿಸಿಕೊಂಡು ಉತ್ತಮವಾದ ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ಭಾಗಿಗಳಾಗಬೇಕು. ಮಾನವ ಸಂಪನ್ಮೂಲದ ಸರಿಯಾದ ಬಳಕೆಯಾಗುವಂತೆ ಯತ್ನಿಸಬೇಕು” ಎಂದು ಸಲಹೆ ನೀಡಿದರು. ಉಪನ್ಯಾಸಕ ಶಿವಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಮತಿ ವಂದಿಸಿದರು. ದ್ವಾರಕಾ ಪ್ರತಿಷ್ಠಾನದ ಮ್ಯಾನೇಜರ್ ದಯಾನಂದ ಸಹಕರಿಸಿದರು

LEAVE A REPLY

Please enter your comment!
Please enter your name here