ಪಾಲ್ತಾಡಿ ಶಾಲೆಯಲ್ಲಿ ಮನೆಗೊಂದು ಮರ,ಮಗುವಿಗೊಂದು ಗಿಡ ಅಭಿಯಾನ

0

ಸವಣೂರು : ಮಕ್ಕಳಿಗೆ ಎಳವೆಯಲ್ಲೇ ಪರಿಸರ ಜಾಗೃತಿ ಮೂಡಿಸಬೇಕಿರುವುದು ಅತ್ಯಗತ್ಯ.ಪರಿಸರ ಸ್ವಚ್ಛಂದವಾಗಿದ್ದರೆ ನಾವು ಕೂಡ ಆರೋಗ್ಯಯುತವಾಗಿರಲು ಸಾಧ್ಯ ಎಂದು ಸವಣೂರು ಗ್ರಾ.ಪಂ.ಸದಸ್ಯ ತಾರಾನಾಥ ಬೊಳಿಯಾಲ ಹೇಳಿದರು.

ಅವರು ಸೆ.4ರಂದು ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮನೆಗೊಂದು ಮರ ಮಗುವಿಗೊಂದು ಗಿಡ ಯೋಜನೆಯ ಅಡಿಯಲ್ಲಿ ಪ್ರತೀ ಮಗುವಿಗೂ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ ಮಾತನಾಡಿ,ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ಸಣ್ಣ ಪ್ರಯತ್ನವನ್ನು ಮಾಡಿದ್ದು, ಆ ಗಿಡವನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ಮಕ್ಕಳಿಗೇ ನೀಡಲಾಗಿದೆ ಎಂದರು.ಲೋಹಿತ್ ಬಂಗೇರ ಬಾಲಯ ಅವರು 50 ಗಿಡಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಸುಮಲತಾ, ಸದಸ್ಯರಾದ ಉದಯ ಗೌಡ,ಸುಂದರ,ಭಾರತಿ, ಯಶೋಧಾ, ಜಾನಕಿ, ಛಾಯಾ, ನಾರಾಯಣ ಭಟ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here