ಕಡಬದ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ನಲ್ಲಿ ತಯಾರಿಸಿದ ಬೆಳ್ಳಿ ಕಿರೀಟ ಹಸ್ತಾಂತರ

0

ಕಡಬ: ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಉತ್ತರಾದಿ ಮಠದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿಗೆ ತೊಡಿಸಲು ಸಮಿತಿಯ ವತಿಯಿಂದ ಕಡಬದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಯಾದ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ನಲ್ಲಿ ತಯಾರಿಸಿದ ಬೆಳ್ಳಿ ಕಿರೀಟವನ್ನು ಸಮಿತಿಯ ಪದಾಧಿಕಾರಿಗಳಿಗೆ ಹತ್ತಾಂತರಿಸಲಾಯಿತು.

ಬೆಳ್ಳಿಕಿರೀಟವನ್ನು ಹಸ್ತಾಂತರಿಸಿ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ನ ಮಾಲಕ ಕೆ ಎಸ್ ದಿನೇಶ್ ಆಚಾರ್ಯ ಮಾತನಾಡಿ ಸುಮಾರು 51 ವರ್ಷಗಳ ಹಿಂದೆ ಸದಾನಂದ ಆಚಾರ್ಯ ಅವರು ಕಡಬದಲ್ಲಿ ಪ್ರಾರಂಭಿಸಿದ ಕಡಬದ ಪ್ರಥಮ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಮಳಿಗೆಯಾದ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ಇಂದು ಕೂಡ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಪೂರಕವಾಗಿ ಗುಣಮಟ್ಟದ ಸೇವೆ ನೀಡುತ್ತಿದೆ. ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಗಣಪನಿಗೆ ಬೆಳ್ಳಿಯ ಕಿರೀಟವನ್ನು ತಯಾರಿಸಿ ಕೊಡುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದು ಅದನ್ನು ಕ್ಲಪ್ತ ಸಮಯದಲ್ಲಿ ಮಿತ ದರದಲ್ಲಿ ಸಮಿತಿಯವರಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿ ಕೊಟ್ಟಿದ್ದೇವೆ. ನಮ್ಮಲ್ಲಿ ಬೆಳ್ಳಿ ಮತ್ತು ಚಿನ್ನಾಭರಣಗಳು ಮಾತ್ರವಲ್ಲದೆ ದೈವ ದೇವರುಗಳು ಚಿನ್ನ, ಬೆಳ್ಳಿಯ ಹರಕೆ ಸಾಮಾಗ್ರಿಗಳು, ಚಿನ್ನ ಹಾಗೂ ಬೆಳ್ಳಿಯ ಸ್ಮರಣಿಕೆಗಳು, ಪೂಜಾ ಸಾಮಗ್ರಿಗಳು ಲಭ್ಯವಿದೆ ಎಂದು ಹೇಳಿದರು.

ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಎ ವೆಂಕಟರಾಜ್, ರಾಜೇಶ್ ಎನ್ ಎಸ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಪೂರ್ವಾಧ್ಯಕ್ಷ ಲೋಕೇಶ್ ಬಿ ಎಂ, ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಜತೆ ಕೋಶಾಧಿಕಾರಿ ಶ್ರೀಕುಮಾರ್ ಬಿಲದ್ವಾರ, ಸದಸ್ಯ ಸುಖೇಶ್ ಸುಧಿ, ಶ್ರೀದೇವಿ ಗೋಲ್ಡ್ ಪ್ಯಾಲೇಸ್ ನ ಪಾಲುದಾರ ಕೆ ಎಸ್ ಪ್ರಶಾಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here