ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಸೆ.7ರಂದು ವಿಶೇಷ ಕಾರ್ಯಕ್ರಮ ದೇವಾಲಯದ ಅರ್ಚಕ ನವೀನ್ ಹೆಬ್ಬಾರ್ ಇವರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಮಹಾ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಮಹಾ ಪೂಜೆಗೆ ಗಣಪತಿ ದೇವರಿಗೆ ವಿಶೇಷ ನೈವೇದ್ಯ ಸಮರ್ಪಣೆ ನಡೆಯಿತು.
ಗ್ರಾಮಸ್ಥರ ಸಭೆ: ಬರುವ ನವರಾತ್ರಿ ಉತ್ಸವ ಆಚರಿಸುವ ಕುರಿತು ಚರ್ಚಿಸಲು ಗ್ರಾಮಸ್ಥರ ಸಭೆ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ದೇವರಿಗೆ ರಂಗಪೂಜೆ, ಚಂಡಿಕಾ ಹೋಮ ನಡೆಸುವುದು. ಅಲ್ಲದೆ ಪ್ರತಿ ದಿನ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ, ಆಯುಧ ಪೂಜೆ, ತೆನೆ ತುಂಬಿಸುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ನಿರ್ಣಯಿಸಲಾಯಿತು. ನಂತರ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ನೂತನ ಸಮಿತಿಯನ್ನು ರಚಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಮಾರ ನರಸಿಂಹ ಭಟ್ ಸ್ವಾಗತಿಸಿ ವಂದಿಸಿದರು.
ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸೋಣ ಶನಿವಾರ ಪ್ರಯುಕ್ತ ಬಲಿವಾಡು ಕೂಟ ಮತ್ತು ಅನ್ನಸಂತರ್ಪಣೆ ನಡೆಯಿತು. ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಪ್ರವೀಣ್ ಎನ್.ಆರಿಗ ನಿಡ್ಪಳ್ಳಿ ಗುತ್ತು ಮತ್ತು ಮನೆಯವರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.