ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ದೇವಸ್ಥಾನ, ದೈವಸ್ಥಾನ ಮತ್ತು ಗರಡಿಗಳ ಜೀರ್ಣೋದ್ದಾರಕ್ಕಾಗಿ 2.50ಕೋ. ರೂ ಅನುದಾನ ಮಂಜೂರಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಅನುದಾನವನ್ನು ಮಂಜೂರು ಮಾಡಿರುತ್ತಾರೆ.
ಮಂಜೂರುಗೊಂಡ ಅನುದಾನ ಮತ್ತು ಕ್ಷೇತ್ರಗಳು
ಪುತ್ತೂರು ತಾಲೂಕು ಕುರಿಯ ಗ್ರಾಮದ ಉಳ್ಳಾಲ ಮಹಾವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ದಿಗೆ 5 ಲಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ರೂ.10 ಲಕ್ಷ, ಬಂಟ್ವಾಳ ತಾಲೂಕು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ದಿಗೆ 10 ಲಕ್ಷ , ಬೆಟ್ಟಂಪಾಡಿ ಗ್ರಾಮದ ಸಿದ್ದಿವಿನಾಯಕ ಸೇವಾ ಸಂಘ ಭಜನಾಮಂದಿರ ಅಭಿವೃದ್ದಿಗೆ 5 ಲಕ್ಷ, ಕೋಡಿಂಬಾಡಿ ಗ್ರಾಮದ ಶ್ರೀ ರಾಜರಾಜೇಶ್ವರಿ ಮಠಂತಬೆಟ್ಟು ದೇವಸ್ಥಾನಕ್ಕೆ 10 ಲಕ್ಷ, ಕೆದಿಲ ಗ್ರಾಮದ ಶ್ರೀ ಉಳ್ಳಾಕುಲು ದೂಮಾವತಿ ಮಲರಾಯ ದೇವಸ್ಥಾನಕ್ಕೆ 10 ಲಕ್ಷ, ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಹೊಸಮನೆ ಮಲರಾಯ ದೇವಸ್ಥಾನ ಅಬಿವೃದ್ಧಿಗೆ 5 ಲಕ್ಷ, ಅರಿಯಡ್ಕ ಗ್ರಾಮದ ಕೋಟಿ ಚೆನ್ನಯ ಗರಡಿ ಅಭಿವೃದ್ದಿಗೆ 5 ಲಕ್ಷ, ಪಡ್ನೂರು ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ಭಜನಾಮಂದಿರ ದೇವಸ್ಥಾನ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ, ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ, ಅಳಿಕೆ ಗ್ರಾಮದ ಶಂಕರ ನಾರಾಯಣ ಎರುಂಬು ದೇವಸ್ಥಾನ ಅಭಿವೃದ್ಧಿಗೆ 3 ಲಕ್ಷ, ಸರ್ವೆ ಗ್ರಾಮದ ಸುಬ್ರಾಯ ದೇವಸ್ಥಾನದ ಸಭಾಂಗಣಕ್ಕೆ 10 ಲಕ್ಷ, ಸರ್ವೆ ಗ್ರಾಮದ ಭಕ್ತಕೋಡಿ ಶ್ರೀರಾಮ ಭಜನಾಮಂದಿರಕ್ಕೆ 5 ಲಕ್ಷ , ಕೊಡಿಪ್ಪಾಡಿ ಶ್ರೀ ಜನಾರ್ಧನ ದೇವಸ್ಥಾನಕ್ಕೆ 10 ಲಕ್ಷ, ಒಳಮೊಗ್ರು ಗ್ರಾಮದ ಶ್ರೀ ಶಕ್ತಿ ಜಠದಾರಿ ಭಜನಾಮಂದಿರ ಅಜ್ಜಿಕಲ್ಲು ಗೆ 5 ಲಕ್ಷ, ಬೆಳ್ಳಿಪ್ಪಾಡಿ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿಗೆ 10 ಲಕ್ಷ, ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ, ಶಾಂತಿಗೋಡು ಗ್ರಾಮದ ಮರಕ್ಕೂರು ವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ದಿಗೆ 10 ಲಕ್ಷ, ನೆಟ್ಟಣಿಗೆ ಮುಡ್ನೂರು ಮೇನಾಲ ಜಲಧರ ಕಾಲನಿ ಮಾರಿಯಮ್ಮ ಅಭಿವೃದ್ದಿಗೆ 10 ಲಕ್ಷ, ಶಾಂತಿನಗರ ನೆಕ್ಕಿಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ದಿಗೆ 5 ಲಕ್ಷ, ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಅಭಿವೃದ್ದಿಗೆ 10 ಲಕ್ಷ, ನಿಡ್ಪಳ್ಳಿ ಗ್ರಾಮದ ಶ್ರೀ ಶಾಂತದುರ್ಗಾ ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ, ಬೆಟ್ಟಂಪಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ 10 ಲಕ್ಷ, ಪಾಣಾಜೆ ರಣಮಂಗಳ ಸುಬ್ರಹ್ಮಣ ದೇವಸ್ಥಾನಕ್ಕೆ 10 ಲಕ್ಷ, ಉಪ್ಪಿನಂಗಡಿ ಗ್ರಾಮದ ಕದಿಕಾರು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಅಭಿವೃದ್ದಿಗೆ 10 ಲಕ್ಷ, ವಿಟ್ಲ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಾಲಯಕ್ಕೆ 7 ಲಕ್ಷ, ಇರ್ದೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ 5 ಲಕ್ಷ, ಮಾಣಿಲ ಕಾಮಜಾಲು ಮೊಗೇರ ದೈವದ ದೇವಸ್ಥಾನಕ್ಕೆ 5 ಲಕ್ಷ, ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ 5 ಲಕ್ಷ, ವಿಟ್ಲ ಪುಚ್ಚೇಗುತ್ತು ಚಾಮುಂಡೇಶ್ವರಿ ಗುಳಿಗ ಕೊರಗ ತನಿಯ ದೇವಸ್ಥಾನಕ್ಕೆ 5 ಲಕ್ಷ, ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸನ್ನಿಧಿಗೆ 5 ಲಕ್ಷ, ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 10 ಲಕ್ಷ, ಅಳಿಕೆ ಗ್ರಾಮದ ಪಿಲಿಚಾಮುಂಡಿ ಕಲ್ಲೆಂಚಿಪಾದೆ ಸನ್ನಿಧಿಗೆ 5 ಲಕ್ಷ, ಉಪ್ಪಿನಂಗಡಿ ದಡ್ಡು ಶ್ರೀದೇವಿ ಆದಿಶಕ್ತಿ ಭಜನಾಮಂದಿರಕ್ಕೆ 5 ಲಕ್ಷ, ಹಾಗೂ ಸರ್ವೆ ಗ್ರಾಮದ ತಿಂಗಳಾಡಿಯ ಶ್ರೀ ಮಾರಿಯಮ್ಮ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ 5 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.