





ಪುತ್ತೂರು : ಬಿಜೆಪಿ ಗ್ರಾಮಾತರ ಮಂಡಲದ ಆರ್ಯಾಪು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಬೆಟ್ಟಂಪಾಡಿ ಶಕ್ತಿಕೇಂದ್ರದ ಪ್ರಮುಖರಾಗಿ ಸಂದೀಪ್ ರೈ ಬಾಜುವಳ್ಳಿ ನೇಮಕಗೊಂಡಿದ್ದಾರೆ.


ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ 6 ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಗೆ ಸೇರಿದ ಶಕ್ತಿಕೇಂದ್ರಗಳ ಪ್ರಮುಖರನ್ನು ನೇಮಕ ಮಾಡಲಾಗಿದ್ದು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪದಾಧಿಕಾರಿಗಳ ಘೋಷಣೆ ಮಾಡಿದ್ದರು.





ಬೆಟ್ಟಂಪಾಡಿ ಗ್ರಾಮದ ಬಾಜುವಳ್ಳಿ ನಿವಾಸಿಯಾದ ಸಂದೀಪ್ ರೈ ರವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು ಬೆಟ್ಟಂಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.






