ಸವಣೂರು : 42 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ- ಧಾರ್ಮಿಕ ಸಭೆ

0

ಗಣಪನ ಆರಾಧನೆಯಿಂದ ಐಕ್ಯ ಭಾವನೆ – ಮಾಧವ ಭಟ್


ಪುತ್ತೂರು: ಗಣಪನ ಆರಾಧನೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ವಿಘ್ನ ವಿನಾಶಕನಾದ ಗಣಪನಿಗೆ ಮೊದಲ ಪೂಜೆ ಸಲ್ಲುತ್ತದೆ. ಸಾರ್ವಜನಿಕ ನೆಲೆಯಲ್ಲಿ ನಾವು ಗಣೇಶ ಚತುರ್ಥಿಯನ್ನು ಆಚರಣೆಯನ್ನು ಮಾಡುವುದರಿಂದ, ನಮ್ಮಲ್ಲಿ ಐಕ್ಯ ಭಾವನೆ ಬೆಳೆಯುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಮಾಧವ ಭಟ್ ಹೇಳಿದರು.


ಅವರು ಸೆ.9 ರಂದು ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿದ 42 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಧರ್ಮದಲ್ಲಿ ವೈಶಲ್ಯ ಭಾವನೆಯು ವೃದ್ಧಿಯಾಗಬೇಕು. ಮುಂದಿನ ಯುವ ಪೀಳಿಗೆ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಕಾರ್‍ಯವನ್ನು ಮುಂದುವರಿಸಿಕೊಂಡು ಹೋಗುವ ಪ್ರವೃತ್ತಿ ಬೆಳೆಯುವಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರೇರಣೆಯಾಗಲಿ ಎಂದರು.

ಸಾಂಗವಾಗಿ ನಡೆದಿದೆ- ಶಿವರಾಮ ಗೌಡ
ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದುರವರು ಮಾತನಾಡಿ ಎಲ್ಲರ ಸಹಕಾರ-ಪ್ರೋತ್ಸಾಹದಿಂದ ಮೂರು ದಿನಗಳ ಕಾಲ ನಡೆದ ಎಲ್ಲಾ ಕಾರ್‍ಯಕ್ರಮಗಳು ಸಾಂಗವಾಗಿ ನಡೆದಿದೆ ಎಂದು ಹೇಳಿದರು.

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

ಮಾದರಿ ಕಾರ್‍ಯಕ್ರಮ- ಸಂದೇಶ್
ಸವಣೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್‌ರವರು ಮಾತನಾಡಿ ಸವಣೂರಿನ ಗಣೇಶೋತ್ಸವ ಮಾದರಿ ಕಾರ್‍ಯಕ್ರಮವಾಗಿದೆ ಎಂದು ಶುಭಹಾರೈಸಿದರು.

ಎಲ್ಲರ ಸಹಕಾರ ಅಗತ್ಯ- ಸೀತಾರಾಮ ರೈ
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಧುರೀಣರಾಗಿದ್ದ ದಿ.ಕೆ.ಎಸ್.ಎನ್.ನಿಡ್ವಣ್ಣಾಯ ಕುಮಾರಮಂಗಲ ಮತ್ತು ಸವಣೂರು ಸಿ.ಎ, ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ದಿ. ಚಂದ್ರಾಕ್ಷ ರೈ ಕೊಯಿಲರವರು 42 ವರ್ಷಗಳ ಹಿಂದೆ ಸವಣೂರಿನಲ್ಲಿ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ್ದರು. ಅಂದಿನಿಂದ ಇಂದಿನ ತನಕ ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಮುಂದೆಯು ಎಲ್ಲರ ಸಹಕಾರ ಅಗತ್ಯ ಎಂದರು.


ವೇದಿಕೆಯಲ್ಲಿ ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್. ಸುಂದರ ರೈ, ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಘವ ಗೌಡ ಸವಣೂರು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಜೊತೆ ಕಾರ್‍ಯದರ್ಶಿ ಪ್ರಭಾಕರ್ ಶೆಟ್ಟಿ ನಡುಬೈಲು, ಸತೀಶ್ ಬಲ್ಯಾಯ ಕನಡಕುಮೇರು, ಗಂಗಾಧರ ಸುಣ್ಣಾಜೆ, ವಿಜಯ ಈಶ್ವರ ಗೌಡ, ಕುಸುಮಾ ಪಿ. ಶೆಟ್ಟಿ ಕೆರೆಕೋಡಿ ಅತಿಥಿಗಳನ್ನು ಗೌರವಿಸಿದರು. ಗಣೇಶೋತ್ಸವ ಸಮಿತಿಯ ಕಾರ್‍ಯದರ್ಶಿ ಸುಧಾಕರ್ ರೈ ದೇವಸ್ಯ ವಂದಿಸಿದರು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ನಮಿತಾ ಪ್ರಾರ್ಥನೆಗೈದರು. ಸವಣೂರು ಸಿ.ಎ,ಬ್ಯಾಂಕ್ ಸಿಇಓ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿದರು. ಪೂರ್ವಹ್ನ ಗಣಪತಿ ಹೋಮ, ಭಜನೆ, ಕುಣಿತ ಭಜನೆ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ಜರಗಿತು.

ಮುಂದಿನ ವರ್ಷ ಸವಣೂರು ಸುಂದರ ರೈಯವರಿಂದ ಗಣಪತಿ ದೇವರಿಗೆ ಬೆಳ್ಳಿಕಿರೀಟ
2025 ಕ್ಕೆ ಸವಣೂರು ಸಾರ್ವಜನಿಕ ಗಣೇಶೋತ್ಸವಕ್ಕೆ 43 ನೇ ವರ್ಷವಾಗಿದ್ದು, ಈ ಸಂದರ್ಭದಲ್ಲಿ ಸವಣೂರಿನ ಉದ್ಯಮಿ ಎನ್.ಸುಂದರ ರೈಯವರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಗಣಪತಿ ದೇವರಿಗೆ ಬೆಳ್ಳಿಕಿರೀಟವನ್ನು ಸಮರ್ಪಣೆಯನ್ನು ಮಾಡಲಿದ್ದಾರೆ. ಸವಣೂರು ಗಣೇಶೋತ್ಸವ ಇನ್ನೂ ಹೆಚ್ಚಿನ ರೀತಿಯಲ್ಲಿ ಅದ್ದೂರಿಯಾಗಿ ನಡೆಯಬೇಕು. ಊರಿನ ಎಲ್ಲರೂ ಭಾಗವಹಿಸಬೇಕು.
ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ
ಗೌರವಾಧ್ಯಕ್ಷರು, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ

LEAVE A REPLY

Please enter your comment!
Please enter your name here