ಬೆಥನಿ ಆಂಗ್ಲ ಮಾದ್ಯಮ ಶಾಲೆ ತ್ರೋಬಾಲ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿ .ಪ್ರಾ ಶಾಲೆ ಇವರ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ/ಬಾಲಕಿಯರ ತ್ರೋಬಾಲ್ ಪಂದ್ಯಾಟವು ಸೆಪ್ಟೆಂಬರ್ 9ನೇ ಸೋಮವಾರದಂದು ಸುಳ್ಯಪದವು ಸರ್ವೋದಯ ಕ್ರೀಡಾಂಗಣದಲ್ಲಿ ನಡೆಯಿತು.


ಈ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಪಾಂಗ್ಲಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಪಂದ್ಯಾಟದಲ್ಲಿ ಉತ್ತಮ ಆಲ್ರೌಂಡರ್ ಆಗಿ ಬೆಥನಿಯ ಆದ್ಯಾ ಕೆ ಇವರು ಪ್ರಶಸ್ತಿಯನ್ನು ಪಡೆದಿರುತ್ತಾರೆ. ತಂಡದ ಆಟಗಾರರಾದ ಆದ್ಯಾ ಕೆ, ಹಿಮಾಶ್ರೀ, ಮುನವರ, ಶಾನ್ವಿ, ಸ್ನಿಗ್ಧಾ, ಜುಲ್ಫಾ, ಜೆರುಷ, ಸಮನ್ವಿ, ರೆಯ, ಮಿನ್ಹ, ನಜ, ವಿನ್ಯಾ ಮುಂತಾದವರು ಉತ್ತಮ ಪ್ರದರ್ಶನ ನೀಡಿರುತ್ತಾರೆ. ಈ ತಂಡಕ್ಕೆ ಶಾಲಾ ದೈಹಿಕ ಶಿಕ್ಷಕರಾದ ನಿರಂಜನ್ ಮತ್ತು ಅಕ್ಷಯ್ ರವರು ತರಬೇತಿ ನೀಡಿರುತ್ತಾರೆ. ಶಾಲಾ ಶಿಕ್ಷಕಿ ಸಂಗೀತಾ ವ್ಯವ್ವಸ್ಥಾಪಕಿಯಾಗಿ ಸಹಕರಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸೆಲಿನ್ ಪೆತ್ರಾ ರವರು ತಂಡಕ್ಕೆ ಶುಭ ಹಾರೈಸಿದ್ದಾರೆ.


ಸೆ.18ಕ್ಕೆ ಜಿಲ್ಲಾ ಮಟ್ಟದ ಪಂದ್ಯಾಟ:
ಜಿಲ್ಲಾ ಮಟ್ಟದ ಪಂದ್ಯಾಟವು ಸೆ.18ರಂದು ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾಟಕ್ಕೆ ಬೆಥನಿ ಶಾಲಾ ಪರವಾಗಿ ಬಾಲಕಿಯರ ವಿಭಾಗದಲ್ಲಿ ನಿರೀಕ್ಷ ಎಚ್ ಶೆಟ್ಟಿ, ಆಯಿಷಾತ್ ಹಿಬಾ, ಆದ್ಯಾ ಕೆ, ಹಿಮಾಶ್ರೀ, ಮುನವರ, ಶಾನ್ವಿ, ಸ್ನಿಗ್ಧಾ, ಜುಲ್ಫಾ, ಜೆರುಷ, ಸಮನ್ವಿ, ರೆಯ, ಆಟವಾಡಲಿದ್ದಾರೆ ಎಂದು ಶಾಲಾ ದೈಹಿಕ ಶಿಕ್ಷಕರಾದ ನಿರಂಜನ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here