ಪಾಲ್ತಾಡಿ : ಶ್ವಾನಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

0

ಸವಣೂರು : ದಕ್ಷಿಣ ‌ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಡಬ ಆಶ್ರಯದಲ್ಲಿ ಸವಣೂರು ಗ್ರಾಮ ಪಂಚಾಯತ್, ಶ್ರೀ ರಾಮ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟ, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಸಹಯೋಗದಲ್ಲಿ ಶ್ವಾನಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಸೆ.10ರಂದು ಪಾಲ್ತಾಡಿ ಗ್ರಾಮದಲ್ಲಿ ನಡೆಯಿತು.

ಅಂಕತಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಣ್ಣ ರೈ ಬಾಕಿಜಾಲು ಅವರು ಶಿಬಿರವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ ಪಾಲ್ತಾಡಿ, ಹರೀಶ್ ಕಾಯರಗುರಿ,ವಿನೋದಾ ರೈ ಚೆನ್ನಾವರ,ಕೊಳ್ತಿಗೆ ಸಿ.ಎ.ಬ್ಯಾಂಕ್ ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು,ಕಡಬ ತಾಲೂಕು ಪಶುವೈದ್ಯಾಧಿಕಾರಿ ಡಾ.ಅಜಿತ್, ಅಂಕತಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರೋಶನ್ ಬಂಗೇರ ಬಾಲಾಯ,ಪಶು ಸಖಿ ಹೇಮಲತಾ,ಮೋನಪ್ಪ ಪೂಜಾರಿ ಅಂಕತಡ್ಕ, ಕರುಣಾಕರ ಕಲ್ಲಕಟ್ಟ, ದಯಾಕರ ಕುಂಜಾಡಿ,ಕಿಶೋರ್ ಕುಮಾರ್ ಪೆರ್ಲಂಪಾಡಿ, ಹರೀಶ್ ಮಡಿವಾಳ,ಪ್ರೇಮಾ ಕಲ್ಲಕಟ್ಟ ಮೊದಲಾದವರಿದ್ದರು.ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ.ವಂದಿಸಿದರು.

ವಿವಿದೆಡೆ ಶಿಬಿರ
ಶಿಬಿರವು ಪಾಲ್ತಾಡಿ ಶಾಲಾ ಬಳಿ, ಪಾದೆಮೇಲು ಜಂಕ್ಷನ್ ಬಳಿ,ಉಪ್ಪೊಲಿಗೆ ಹಾಲಿನ ಡಿಪೋ ಬಳಿ,ಕಾಯರಗುರಿ ,ಚೆನ್ನಾವರ ಶಾಲಾ ಬಳಿ,ಮಂಜುನಾಥನಗರ ಜಂಕ್ಷನ್ ಬಳಿ,ಅಂಗಡಿಮೂಲೆ ಬಳಿ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 136 ಶ್ವಾನಗಳಿಗೆ ಲಸಿಕೆ ಹಾಕಲಾಯಿತು.

LEAVE A REPLY

Please enter your comment!
Please enter your name here