ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಮಹಾಸಭೆ

0

ರೂ.32.40ಕೋಟಿ ವ್ಯವಹಾರ, 10.02ಲಕ್ಷ ಲಾಭ, ಶೇ.12 ಡಿವಿಡೆಂಡ್

ಪುತ್ತೂರು:ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.32.40ಕೋಟಿ ವ್ಯವಹಾರ ನಡೆಸಿ ರೂ.10.02,769.14 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಸೆ.11ರಂದು ಸಂಘದ ಪ್ರಧಾನ ಕಚೇರಿಯ ಮಾಧುರಿ ಸೌಧ’ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷ ಸಂಘದಲ್ಲಿ 3,030 ಸದಸ್ಯರಿಂದ ರೂ.13,77,200 ಪಾಲು ಬಂಡವಾಳ, ರೂ.68,22,582 ಕ್ಷೇಮನಿಧಿ, ರೂ.57,17,750 ಇತರ ನಿಧಿಗಳು ಹಾಗೂ ರೂ.3,78,95,878 ಠೇವಣಾತಿಗಳನ್ನು ಹೊಂದಿದೆ. ರೈತರಿಂದ 1,07,391 ಕೆ.ಜಿ ಜೇನು ಖರೀದಿಸಿ, 1,03,002 ಕೆ.ಜಿ ಜೇನು ಮಾರಾಟ ಮಾಡಲಾಗಿದೆ. ರೂ.2.74ಕೋಟಿ ಜೇನು ವ್ಯವಹಾರ ಮಾಡಿ ರೂ.85.27ಲಕ್ಷ ಮಾರಾಟ ಲಾಭ ಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವುಎ’ ಶ್ರೇಣಿಯನ್ನು ಪಡೆದುಕೊಂಡಿದೆ. 2023-24ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಹಾಗೂ ರೂ.10,000 ಮೌಲ್ಯದ ಪಾಲು ಪತ್ರ ನೀಡಿ ಗೌರವಿಸಿದೆ ಎಂದರು.


ಸನ್ಮಾನ, ಅಭಿನಂದನೆ:
ಸಂಘದ ತ್ರೈಮಾಸಿಕ ಪತ್ರಕೆ ಮಧುಪ್ರಪಂಚದ ಸಂಪಾದಕರಾಗಿರುವ ನಾರಾಯಣ ರೈಯವರನ್ನು ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ಪೂರೈಕೆ ಮಾಡಿದ ಬಶೀರ್ ಎಂ., ಚೆನ್ನಕೇಶವ ಪೊಯ್ಯೆಮಜಲು ಸುಳ್ಯ, ರಾಧಾಕೃಷ್ಣ ದಾಸ್ ಉಬರಡ್ಕ, ಸುಧಾಕರ ಕೇಪು, ಮುರಳೀಧರ ಜಿ.ಟಿ ಯೇನೆಕಲ್ಲು, ಲಿಂಗಪ್ಪ ಗೌಡ ಅಮರಪಡ್ನೂರು, ಮಂಜಪ್ಪ ಎನ್., ವಿಜಯ ಕುಮಾರ್ ಬಾಳೆಕಲ್ಲು, ಹೊನ್ನಪ್ಪ ಗೌಡ ಬಾಳುಗೋಡು, ದಿನೇಶ್ ಅರಂಬ್ಯ, ಸುರೇಶ್ ರೈ ಇರ್ದೆ, ಭರತ್ ಕುಮಾರ್ ಕೆ., ಮನಮೋಹನ ಅರಂಬ್ಯ, ಕೆ.ಪುಟ್ಟಣ್ಣ ಗೌಡ ಕಾಡುತೋಟ, ಹರೀಶ್ ಕೋಡ್ಲ, ಶಿವಾನಂದ ನೆಲ್ಲಿಪದವು, ಸಂಘದಿಂದ ಅತೀ ಹೆಚ್ಚು ಖರೀದಿ ಮಾಡಿದ ಕರುಣಾಕರ ಹಿರಿಯಡ್ಕ ಉಡುಪಿ, ತತ್ವ ಆಗ್ರೋಟೆಕ್ ಬೆಂಗಳೂರು, ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ವಿಜಯ ಕುಮಾರ್ ಕನ್ಯಾಡಿಯವರನ್ನು ಅಭಿನಂದಿಸಲಾಯಿತು.


ನಿರ್ದೇಶಕರಾದ ಜಿ.ಪಿ ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ.ತನಿಯಪ್ಪ, ಶ್ರೀಶ ಕೊಡವೂರು, ಎಚ್.ಸುಂದರ ಗೌಡ, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮನಮೋಹನ ಅರಂಬ್ಯ, ಪುಟ್ಟಣ್ಣ ಗೌಡ ಕೆ., ಗೋವಿಂದ ಭಟ್ ಪಿ., ಶಂಕರ ಪಿ., ಸರಸ್ವತಿ ವೈ.ಪಿ ಹಾಗೂ ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಿಬಂದಿ ದಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here