ಸೆ.13: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಿಟ್ಲ ಶಾಖೆಯ ಸ್ವಂತ ಕಟ್ಟಡ ಕೋಣೆಯ ಉದ್ಘಾಟನೆ

0

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದೊಂಡು 15 ಶಾಖೆಗಳ ಮೂಲಕ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿಕೊಂಡು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಿಟ್ಲ ಶಾಖೆ ಸ್ಥಳಾಂತರಗೊಂಡು ಸ್ವಂತ ಕಟ್ಟಡ ಕೋಣೆಯ ಉದ್ಘಾಟನೆಯು ಸೆ.13ರಂದು ವಿಟ್ಲ ಮುಖ್ಯರಸ್ತೆಯಲ್ಲಿನ ವಿಟ್ಲ ಸ್ಮಾರ್ಟ್ ಸಿಟಿಯಲ್ಲಿ ನಡೆಯಲಿದೆ.


ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ವಕೀಲ ಭಾಸ್ಕರ್ ಎಂ ಪೆರುವಾಯಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ 1958ನೇ ಇಸವಿಯಲ್ಲಿ ದಿ.ಅರಿಯಡ್ಕ ಕೃಷ್ಣ ಮೂಲ್ಯ ಅವರ ಮುಂದಾಳುತ್ವದಲ್ಲಿ ಗ್ರಾಮೀಣ ಕುಂಬಾರಿಕೆಯ ಅಭಿವೃದ್ಧಿಗಾಗಿ ಸ್ಥಾಪನೆಯಾದ ಸಹಕಾರ ಸಂಘವು ಇಂದು ವಿಸ್ತಾರವಾಗಿ ಬೆಳೆದು ಅಭಿವೃದ್ದಿಯ ಪಥದಲ್ಲಿ ನಡೆಯುತ್ತಿದೆ. ಸಂಘವು 36876 ಸದಸ್ಯ ಬಲವನ್ನು ರೂ. 358.75 ಲಕ್ಷ ಪಾಲು ಬಂಡವಾಳವನ್ನು ಹೊಂದಿದ್ದು, ರೂ. 100 ಕೋಟಿ ಠೇವಣಿ ಹೊಂದಿದ್ದು, ರೂ. 75.50 ಕೋಟಿ ಹೊರಬಾಕಿ ಸಾಲ ಇರುತ್ತದೆ. ಲೆಕ್ಕಪರಿಶೋಧನೆಯಲ್ಲಿ ನಿರಂತರವಾಗಿ ಎ ವರ್ಗವನ್ನು ಕಾಯ್ದುಕೊಂಡಿದ್ದು, 2023-24ನೇ ಸಾಲಿನಲ್ಲಿ ರೂ. 2.02 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.21ಡಿವಿಡೆಂಡ್ ವಿತರಿಸಲಾಗಿದೆ.

ಸಂಘದ ಪುತ್ತೂರು ಕೌಡಿಚ್ಚಾರು, ಮಾಣಿ, ಬಿ.ಸಿ.ರೋಡ್ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ವಿಟ್ಲ ಶಾಖೆಗೂ ಕೂಡಾ ಸ್ವಂತ ಕಟ್ಟಡ ಕೋಣೆಯನ್ನು ಸುಸಜ್ಜಿತವಾದ ಕಟ್ಟಡದಲ್ಲಿ ಖರೀದಿಸಿದ್ದೇವೆ. ಅದರ ಉದ್ಘಾಟನೆಯು ಸೆ.13ರಂದು ನಡೆಯಲಿದ್ದು, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಬಿ.ಎಸ್.ಎಫ್ ಮತ್ತು ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿಯ ಮಾಲಕ ಚಂದಪ್ಪ ಮೂಲ್ಯ ಅವರು ಉದ್ಘಾಟಿಸಲಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕ ನಾಗರಾಜ್ ಯಚ್ ಇ ಭದ್ರತಾ ಕೋಣೆಯನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ದೀಪ ಪ್ರಜ್ವಲನೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರು ಗಣಕ ಯಂತ್ರ ಉದ್ಘಾಟಿಸಲಿದ್ದಾರೆ. ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಉದ್ಯಮಿ ಕೃಷ್ಣಕಿಶೋರ್ ಎನ್.ಟಿ, ವಿಟ್ಲ ಶ್ರೀ ಚಂದ್ರನಾಥ ದೇವರ ಬಸದಿಯ ಅಡಳಿತ ಮೊಕ್ತೇಸರ ವಿನಯ ಕುಮಾರ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ.ಕೆ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ವಿಟ್ಲ ಎಂಪ್ಯಾಯರ್ ಮಾಲ್‌ನ ಮಾಲಕ ಪೀಟರ್ ಎಫ್ ಲಸ್ರಾದೋ, ವಿಟ್ಲ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಭಾರತ್ ಅಡಿಟೋರಿಯಂನ ಮ್ಹಾಲಕ ಸಂಜೀವ ಪೂಜಾರಿ, ಇಂಜಿನಿಯರ್ ರಾಮ ಮೂಲ್ಯ, ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ವಸಂತ ಮೂಲ್ಯ ಎರುಂಬು, ವಿಟ್ಲ ಸ್ಮಾರ್ಟ್ ಸಿಟಿಯ ಮಹಮ್ಮದ್ ಹನೀಫ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಹಿರಿಯ ನಿರ್ದೇಶಕ ಬಿ.ಎಸ್ ಕುಲಾಲ್, ಗಣೇಶ್ ಪಿ ಉಪಸ್ಥಿತರಿದ್ದರು.

ಬೆಳ್ಳಾರೆಯಲ್ಲೂ ಸುಸಜ್ಜಿತ ಕಟ್ಟಡಕ್ಕೆ ನಿವೇಶನ ಖರೀದಿಸಲಾಗಿದೆ
ಬೆಳ್ಳಾರೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು 20 ಸೆಂಟ್ಸ್ ಜಮೀನು ಖರೀದಿಸಲಾಗಿದೆ. ಮುಂದೆ ಅಲ್ಲಿಯೂ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. ಕುಂಬರಿಕಾ ಉತ್ಪಾದನಾ ತರಬೇತಿ ಕೇಂದ್ರ ರಾಜ್ಯದಲ್ಲಿಯೇ ಪುತ್ತೂರಿನಲ್ಲಿ ಏಕಮಾತ್ರವಾಗಿದೆ. ಇಲ್ಲಿ ಕುಶಲ ಕರ್ಮಿಗಳಿಗೆ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಕುಂಬಾರಿಕೆ ವೃತ್ತಿ ಮಾಡಿ 60 ವರ್ಷ ಮೇಲ್ಪಟ್ಟ ಕುಶಲ ಕರ್ಮಿಗಳಿಗೆ ವೃದ್ಧಾಪ್ಯ ವೇತನವನ್ನು ಸಹಕಾರ ಸಂಘದ ಲಾಭದಿಂದ ನೀಡಲಾಗುತ್ತಿದೆ. ಮೂಲ ಉದ್ದೇವಾಗಿ ತಲೆಹೊರೆಯನ್ನು ಕಡಿಮೆ ಮಾಡಲು ಕುಂಬಾರಿಕೆಯ ಮಾರಟಕ್ಕಾಗಿ ಸಂಚಾರಿ ಮಾರಾಟ ವಾಹನ ಖರೀದಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದಿಂದ ವಿಭಾಗ ಮಟ್ಟದಲ್ಲಿ ಉತ್ತಮ ಸಹಕಾರ ಸಂಘ ಎಂದು ಗುರುತಿಸಲ್ಪಟ್ಟಿದೆ. ಅಲ್ಲದೆ ನಿರಂತರವಾಗಿ 5 ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಮ್ಮ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಭಾಸ್ಕರ್ ಎಂ ಪೆರುವಾಯಿ ಅಧ್ಯಕ್ಷರು

LEAVE A REPLY

Please enter your comment!
Please enter your name here