ಟೋಪ್ಕೋ ಜ್ಯುವೆಲ್ಲರಿಯಲ್ಲಿ ‘20% ಅಡ್ವಾನ್ಸ್ ಬುಕ್ಕಿಂಗ್ ಆಫರ್’ – ಗ್ರಾಹಕರಿಂದ ಉತ್ತಮ ಸ್ಪಂದನೆ – ಸೆ.15ರಂದು ಕೊನೆಗೊಳ್ಳಲಿದೆ ಈ ಕೊಡುಗೆಗಳು

0

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಎಂಪಾಯರ್ ಮಾಲ್ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿ ಸಂಸ್ಥೆಯನ್ನು ಹೊಂದಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿ ಈ ಭಾರಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ‘೨೦% ಅಡ್ವಾನ್ಸ್ ಬುಕ್ಕಿಂಗ್’ ಆಫರ್ ಆನ್ನು ನೀಡುತ್ತಿದೆ.

ಟೋಪ್ಕೋ ಸಂಸ್ಥೆಯು ಗ್ರಾಹಕರ ಹಬ್ಬಗಳ ಸಡಗರನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚುತ್ತಿರುವ ಚಿನ್ನದ ದರದಿಂದ ಪಾರಾಗಲು 20% ಮುಂಗಡ ಪಾವತಿ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್ ಮಾಡಿ ಚಿನ್ನಾಭರಣವನ್ನು ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜಸ್ ನಲ್ಲಿಯೂ ವಿಶೇಷ ರಿಯಾಯಿತಿ ದೊರೆಯಲಿದೆ. ಇಷ್ಟು ಮಾತ್ರವಲ್ಲದೆ ನಿಮ್ಮ ಹಳೆಯ ಚಿನ್ನವನ್ನು ಉತ್ತಮ ಬೆಲೆಯೊಂದಿಗೆ ಹೊಸ ನವನವೀನ ವಿನ್ಯಾಸದ ಚಿನ್ನಭರಣಗಳಿಗೆ ಎಕ್ಸ್ ಚೇಂಜ್ ಮಾಡಿಕೊಳ್ಳಬಹುದಾಗಿದೆ. ಮದುವೆ ಆಭರಣ ಖರೀದಿ ವೇಳೆಯೂ ಅತೀ ಕಡಿಮೆ ಮೇಕಿಂಗ್ ಚಾರ್ಜಸ್ ನಲ್ಲಿ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಸಂಸ್ಥೆಯ ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ತಕ್ತವಾಗಿದ್ದು, ಸೆ.೧೫ರ ವರೆಗೆ ಈ ಆಫರ್ ಮುಂದುವರೆಯಲಿದೆ. ಈ ಕೊಡುಗೆಗಳು ವಿಟ್ಲದ ಎಂಪಾಯರ್ ಮಾಲ್ ನಲ್ಲಿರುವ ಟೋಪ್ಕೋ ಜ್ಯವೆಲ್ಲರಿ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂಝಂ ಜ್ಯವೆಲ್ಲರಿಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖೆಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here