ಸೆ.18: ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ದುಂಡುಮೇಜಿನ ಸಭೆ-ಪುತ್ತೂರಿನಿಂದ ಗ್ರಾ.ಪಂ ಜನಪ್ರತಿನಿಧಿ, ಮಕ್ಕಳ ಪ್ರತಿನಿಧಿಗಳಾಗಿ ಮೂವರು ಆಯ್ಕೆ

0

ಪುತ್ತೂರು: ಮಕ್ಕಳ ಹಕ್ಕುಗಳನ್ನು ಸಹಕಾರಗೊಳಿಸುವಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ಇನ್ನಷ್ಟು ಪರಿಣಾಮಕಾಯಾಗಿ ಆಯೋಜಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ಸಹಭಾಗಿತ್ವದಲ್ಲಿ ಸೆ.18ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ದುಂಡುಮೇಜಿನ ಸಭೆಗೆ ಪುತ್ತೂರಿನಿಂದ ಗ್ರಾ.ಪಂ ಜನಪ್ರತಿನಿಧಿ, ಮಕ್ಕಳ ಪ್ರತಿನಿಧಿಗಳಾಗಿ ಮೂವರು ಆಯ್ಕೆಗೊಂಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಿಂದ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಪರವಾಗಿ ಓಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ, ಮಕ್ಕಳ ಪ್ರತಿನಿಧಿಯಾಗಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ ಯು ವಿದ್ಯಾರ್ಥಿನಿ ಕುಮಾರಿ ಹಸ್ತ, ಬೆಳ್ಳಿಪ್ಪಾಡಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಪರವಾಗಿ ನೆಕ್ಕಿಲಾಡಿ 34 ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಸತೀಶ್ ರವರು ಭಾಗವಹಿಸಲಿರುವರು.

ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಸಂಸ್ಥೆಯು ರಾಜ್ಯದ ಆಯ್ದ ಕೆಲವು ಜಿಲ್ಲೆಗಳಲ್ಲಿ ಆಡಳಿತದಲ್ಲಿ ಮಕ್ಕಳು ಎಂಬ ಶೀರ್ಷಿಕೆಯಡಿಯಲ್ಲಿ ಗ್ರಾಮ ಪಂಚಾಯತ್‌ಗಳೊಡನೆ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ. ಈ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿದೆ ಎಂದು ಚೈಲ್ಡ್ ರೈಟ್ ಟ್ರಸ್ಟ್‌ನ ಪುತ್ತೂರು ತಾಲೂಕು ಸಂಯೋಜಕಿ ಕಸ್ತೂರಿ ಆರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here