ಪುತ್ತೂರು: ಸತ್ವಮ್ ಬ್ರಾಂಡ್‌ನ ಮೂಲಕ ಅನೇಕ ಆರೋಗ್ಯಕರ ಗಿಡಮೂಲಿಕಾ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಕೆದಿಲದ ಹಾರ್ದಿಕ್ ಹರ್ಬಲ್ಸ್‌ನವರ ಪ್ರಮುಖ ಉತ್ಪನ್ನ ’ಸತ್ವಮ್ ಕೊಕೋರೇಕಾ’ – ಹರ್ಬಲ್ ಸ್ನಾನದ ಸಾಬೂನ್‌ಗೆ ಭಾರತ ಸರ್ಕಾರದಿಂದ ಪೇಟೆಂಟ್ ಲಭಿಸಿದೆ. ನವೆಂಬರ್ 2021ರಲ್ಲಿ ಪ್ರಾರಂಭವಾದ ಈ ಸುದೀರ್ಘ ಪ್ರಕ್ರಿಯೆಯು ಅನೇಕ ಹಂತಗಳನ್ನು ಯಶಸ್ವಿಯಾಗಿ ಕ್ರಮಿಸಿ, ಬಳಿಕ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ (NBA) ಅನುಮೋದನೆಯನ್ನೂ ಪಡೆದು, ಭಾರತ ಸರ್ಕಾರದ ಹಕ್ಕುಸ್ವಾಮ್ಯ ಕಾರ್ಯಾಲಯ (The Patent Office, GOI)ದಿಂದ 2024ರ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಹಕ್ಕುಸ್ವಾಮ್ಯ ಪಡೆದುಕೊಂಡಿದೆ. ಇದರೊಂದಿಗೆ ಈ ವಿಶೇಷ ಉತ್ಪನ್ನದ ಹಕ್ಕು ಸ್ವಾಮ್ಯವನ್ನು ಮುಂದಿನ 20 ವರ್ಷಗಳಿಗೆ ಹಾರ್ದಿಕ್ ಹರ್ಬಲ್ಸ್ ಕಾಯ್ದಿರಿಸಿಕೊಂಡಿದೆ.
ಏನಿದು ಸತ್ವಮ್ ಕೊಕೋರೇಕಾ:
ಸತ್ವಮ್ ಕೊಕೋರೇಕಾ (Stvam CocoReca) ಕೇವಲ ಒಂದು ಸಾಮಾನ್ಯ ಸಾಬೂನಿನಂತಲ್ಲ. ಅಡಿಕೆ ಹಣ್ಣಿನ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಿಶಿನ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚ ಎಂಬ ಪ್ರಬಲ ಗಿಡಮೂಲಿಕೆಗಳ ಸಮೃದ್ಧ ಮಿಶ್ರಣದಿಂದ ತಯಾರಿಸಲ್ಪಟ್ಟಿದೆ. ಈ ಸಾಬೂನು ತ್ವಚೆಯ ರಕ್ಷಣೆಗಾಗಿ ಪ್ರಕೃತಿಯ ಸತ್ವವನ್ನು ಬಳಸಿ, ನೈಸರ್ಗಿಕ ಮತ್ತು ಪ್ರಯೋಜನಕಾರಿ ಸ್ನಾನದ ಅನುಭವವನ್ನು ಒದಗಿಸುತ್ತದೆ.
ಸತ್ವಮ್ ಕೊಕೋರೇಕಾ ಉಪಯೋಗ:
ಸತ್ವಮ್ ಕೊಕೋರೇಕಾ ಗಿಡಮೂಲಿಕಾ ಸಾಬೂನು ತ್ವಚೆಯನ್ನು ಬಲಪಡಿಸುವ, ಸುಕ್ಕುಗಳನ್ನು ಕಡಿಮೆ ಮಾಡುವ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆಯಂತಹ (ಸಿಬ್ಬ) ಪರಿಸ್ಥಿತಿಗಳನ್ನು ನಿವಾರಣಾ ಮಾಡಲು ಸಹಾಯ ಮಾಡುತ್ತದೆ. ತುರಿಕೆಯನ್ನು ನಿವಾರಿಸುತ್ತದೆ ಮತ್ತು ಗಾಯಗಳ ಗುಣಪಡಿಸುವಿಕೆಯನ್ನು ವೇಗಗೊಳಿಸುತ್ತದೆ. ಈ ಉತ್ಪನ್ನವು ಚರ್ಮದ ಆರೋಗ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸುಸ್ಥಿರತೆಯನ್ನು ಕಾಯ್ದುಕೊಳ್ಳುಲು ನೆರವಾಗುತ್ತದೆ. ಇದರೊಂದಿಗೆ ಸ್ಥಳೀಯ ಮೂಲದ ನೈಸರ್ಗಿಕ ಕೃಷಿ, ಔಷಧೀಯ ಪದಾರ್ಥಗಳ ಉತ್ಪಾದನೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪೇಟೆಂಟ್‌ನಿಂದ ವೈಜ್ಞಾನಿಕವಾಗಿ ಔಷಧೀಯ ಗುಣಗಳು ಸಾಬೀತಾಗಿರುವುದರಿಂದ ಅಡಿಕೆ ಕೃಷಿಯ ಮೌಲ್ಯ ವರ್ಧನೆ ಹಾಗೂ ಅಡಿಕೆಯಲ್ಲಿರುವ ಔಷಧೀಯ ಗುಣಗಳನ್ನು ಪ್ರಚುರಪಡಿಸಿದಂತಾಗಿದೆ.
ಈ ಪೇಟೆಂಟ್‌ನೊಂದಿಗೆ ಹಾರ್ದಿಕ್ ಹರ್ಬಲ್ಸ್, ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ವ್ಯಾಪಕ ಗ್ರಾಹಕರಿಗೆ ಸತ್ವಮ್ ಕೊಕೋರೇಕಾ (Stvam CocoReca)ವನ್ನು ಪರಿಚಯಿಸಲು ಹಾಗೂ ಇನ್ನಷ್ಟು ಗಿಡಮೂಲಿಕೆಗಳ ಉತ್ಪನ್ನಗಳನ್ನು ಉತ್ಪಾದಿಸಲು ಹಿಂದೆಂದಿಗಿಂತಲೂ ಹೆಚ್ಚು ಉತ್ಸುಕವಾಗಿದೆ. ಹಾರ್ದಿಕ್ ಹರ್ಬಲ್ಸ್ ಅನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ. ಗ್ರಾಹಕರ ತ್ವಚೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಪೋಷಿಸುವಂತಹ ಪ್ರಕೃತಿ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುವ ನಮ್ಮ ಧ್ಯೇಯವನ್ನು ಮುಂದುವರಿಸಲು ಈ ಪೇಟೆಂಟ್ ಮಹತ್ವದ ಸ್ಫೂರ್ತಿಯಾಗಿದೆ ಎಂದು ಕಂಪೆನಿಯು ತಿಳಿಸಿದೆ.
2013ರಲ್ಲಿ ನಾನು ಮತ್ತು ನನ್ನ ಪತ್ನಿ ಹರ್ಬಲ್ ಉತ್ಪನ್ನಗಳ “ಸತ್ವಮ್” ಕುಡಿಯುವ ನೀರಿನ ಉದ್ಯಮ ಆರಂಭಿಸಿದೆವು. ಕೋವಿಡ್ ಸಮಯದಲ್ಲಿ ಇಮ್ಯುನಿಟಿ ಹೆಚ್ಚಿಸುವ ನೀರು, ಕಷಾಯ ಸಾಬೂನು ತಯಾರು ಮಾಡಿದ್ದೇವೆ. ಇದೀಗ ಕೋಕೋನಟ್ ಮತ್ತು ಅಡಿಕೆ ಸೇರಿಸಿ ಕೋಕೋರೇಕಾ ಸ್ನಾನದ ಸಾಬೂನು ಉತ್ಪಾದನೆ ಮಾಡಿದ್ದೇವೆ. ನಾವು ಸಣ್ಣವರಿದ್ದಾಗ ಬಿಳಿ ಮಚ್ಚೆಗೆ(ಸಿಬ್ಬ) ಹಣ್ಣಾದ ಅಡಿಕೆಯ ಸಿಪ್ಪೆ ಉಜ್ಜುತ್ತಿದ್ದರು. ಇದು ನಮಗೆ ಉತ್ತೇಜನ ಸಿಕ್ಕಿದೆ
ಮುರಳೀಧರ ಕೆ.
ಹಾರ್ದಿಕ್ ಹರ್ಬಲ್ಸ್ ಮುಖ್ಯಸ್ಥರು
ಅಡಿಕೆ ಬೆಳೆಗೆ ಉತ್ತೇಜನ
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದ್ದಂತೆ ಅಡಿಕೆಯಿಂದ ಪರ್ಯಾಯ ಉತ್ಪನ್ನಗಳ ಬಗ್ಗೆ ಬೆಳೆಗಾರರು ಚಿತ್ತ ಹರಿಸಿದ್ದಾರೆ. ಅಡಿಕೆಯಿಂದ ಬಣ್ಣ, ಚಾಕೋಲೆಟ್, ಚಹಾ, ಕಾಫಿ, ಗಾಜು ಇತ್ಯಾದಿಗಳನ್ನು ಉತ್ಪಾದಿಸುವ ಪ್ರಯತ್ನಗಳು ನಡೆದಿದೆ. ಅನೇಕ ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿದೆ. ಅಡಿಕೆಯ ಹಾಳೆಯಿಂದ ತಟ್ಟೆ ಮಾಡುವ ಉದ್ಯಮ ವ್ಯಾಪಕಾವಗಿ ಬೆಳೆದಿದೆ. ಇದೀಗ ಸಾಬೂನು ತಯಾರಿ ಅಡಿಕೆ ಬೆಳೆಗೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ.