




ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ರವರ ಅಧ್ಯಕ್ಷತೆಯಲ್ಲಿ ಡಿ.11ರಂದು ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.




ಸಭೆಯಲ್ಲಿ ಜಾತ್ರೋತ್ಸವವನ್ನು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಸಭೆಯಲ್ಲಿ ಸಲಹೆ ಸೂಚನೆಗಳನ್ನು ಪಡೆದು ವಿವಿಧ ಸಮಿತಿ ರಚನೆ ಮಾಡಲಾಯಿತು.





ಬಳಿಕ ಅಮಂತ್ರಣ ಪತ್ರಿಕೆ ರೂಪುರೇಷೆ ಸಿದ್ಧಪಡಿಸಲಾಯಿತು.
ಜ.12ರಂದು ಭಜನೋತ್ಸವ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಿಯಡ್ಕ ವಲಯ ವತಿಯಿಂದ ವಲಯ ಮಟ್ಟದ ಭಜನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ 6 ಗ್ರಾಮಗಳಿಂದ ಸುಮಾರು 650 700 ಮಂದಿ ಭಾಗವಹಿಸಲಿದ್ದಾರೆ. ಭಜನೋತ್ಸವ ಕಾರ್ಯಕ್ರಮ ಮತ್ತು ಆನಂತರ ನಡೆಯುವ ಜಾತ್ರೋತ್ಸವ ಕಾರ್ಯಕ್ರಮ ಯಶಸ್ಸಿಯಾಗಿ ನಡೆಸಲು ಸಹಕರಿಸುವಂತೆ ಸಮಿತಿ ಅಧ್ಯಕ್ಷ ಸತೀಶ್ ರೖೆ ವಿನಂತಿಸಿಕೊಂಡರು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಪುರಂದರ ರೖೆ ಕುದ್ಕಾಡಿ, ಶ್ರೀಮತಿ ಕನ್ನಡ್ಕ, ವೖೆದಿಕ ಸಮಿತಿ ಸದಸ್ಯರಾದ ಗಣಪತಿ ಭಟ್ ಪಾದಕರ್ಯ ಸದಾಶಿವ ಭಟ್ ಪೖೆರುಪುಣಿ, ರಾಮಕೃಷ್ಣ ಭಟ್ ಸಿ.ಯಚ್. ಪ್ರಶಾಂತ್ ಭಟ್ ಸಿ.ಯಚ್, ರಾಮ್ ಪ್ರಕಾಶ್ ಕೋಡಿಯಡ್ಕ, ಗಣೇಶ್ ಭಟ್ ಈಶಮೂಲೆ, ಶ್ರೀಕಾಂತ್ ಭಟ್ ಪಾದಕರ್ಯ ದೀಪಕ್ ಭಟ್ ಈಶಮೂಲೆ, ಶ್ರೀ ಪೂಮಾಣಿ ಕಿನ್ನಿಮಾಣಿ ದೖೆವಸ್ಥಾನದ ನಿಕಟಪೂರ್ವ ಸದಸ್ಯ ರವಿರಾಜ ರೖೆ ಸಜಂಕಾಡಿ, ಪ್ರಗತಿ ಪರ ಕೃಷಿಕ ಕಿಟ್ಟಣ್ಣ ರೖೆ ಕುದ್ಕಾಡಿ, ರಾಕೇಶ್ ರೖೆ ಕುದ್ಕಾಡಿ ,ಸುಬ್ಬಯ್ಯ ರೖೆ ಹಲಸಿನಡಿ, ಆಶಾ ರೖೆ ಕೖೊಲ, ಅರ್ಚಕ ಮಹಾಲಿಂಗ ಭಟ್, ನಾರಾಯಣ ಪಾಟಾಳಿ ಪಟ್ಟೆ, ಪುರಂದರ ರೖೆ ಸೇನರಮಜಲು,, ಶ್ರೀಧರ ನಾಯ್ಕ,ಮೖೆಂದನಡ್ಕ ಸಂಜೀವ ಸಾಲಿಯಾನ್, ಮಹಾಲಿಂಗ ಪಾಟಾಳಿ,ಕುದ್ಕಾಡಿ, ಲಿಂಗಪ್ಪ ಗೌಡ ಮೋಡಿಕೆ, ಶಶಿಧರ್ ಪಟ್ಟೆ, ಸತೀಶ್ ಉಳಿಗ,ವಿಘ್ನೇಶ್,ರಾವ್ ಪಡುಮಲೆ, ಗಣೇಶ ಕುಲಾಲ್ ಪೖೆರುಪುಣಿ, , ತೀರ್ಥಪ್ರಸಾದ್, ಬರೆ, ರಾಜೇಶ್ ರೖೆ ಮೇಗಿನಮನೆ, ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಥೆ ಶಂಕರಿ ಪಟ್ಟೆ ಸ್ವಾಗತಿಸಿ ವಂದಿಸಿದರು.




