ಪೇಸ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ

0

ಪುತ್ತೂರು: ಸತತ ಪ್ರಯತ್ನ‌ ನಮ್ಮದಾದಾಗ ಯಶಸ್ಸು‌‌ ಸಾಧ್ಯ. ಸಿವಿಲ್ ಎಲ್ಲದಕ್ಕೂ ಮೂಲ. ನಮ್ಮನ್ನು ನಾವು ಅಪ್ ಗ್ರೇಡ್ ಮಾಡಿಕೊಳ್ಳುವ ಕೆಲಸವಾಗಬೇಕು. ನಮ್ಮಲ್ಲಿ ಅಪ್ ಗ್ರೇಡ್ & ಅಪ್ಡೇಶನ್ ಅತೀ ಮುಖ್ಯ. ಆ ವಿಚಾರದಲ್ಲಿ ಪೇಸ್ ಬಹಳಷ್ಟು ಮುಂದಿದೆ. ಪೇಸ್ ನ ಯೋಚನೆ ಯೋಜನೆಗಳು ಸಮಾಜಮುಖಿಯಾಗಿದೆ.
ಎಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನರವರು ಹೇಳಿದರು.

ಅವರು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್‌ ಇಂಜಿನಿಯರ್ಸ್ ವತಿಯಿಂದ ಸೆ.17ರಂದು ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್ ನಲ್ಲಿ ನಡೆದ ಇಂಜಿನಿಯರ್ಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೇಸ್ ನ ಅಧ್ಯಕ್ಷ ಸತ್ಯ ಗಣೇಶ ಎಂ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೇಸ್ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಿಗೆ ಬಹಳಷ್ಟು ಹತ್ತಿರವಾಗಿದೆ‌. ಸಾಮಾನ್ಯ ಜನರ ನೋವು ನಲಿವಿಗೆ ಸ್ಪಂಧಿಸುವ ಕೆಲಸವನ್ನು ಪೇಸ್ ಸದಾ ಮಾಡುತ್ತಾ ಬಂದಿದೆ. ಇಂಜಿನಿಯರ್ಸ್ ಡೇ ಆಚರಣೆ ಮುಂದಿನ‌ ಪೀಳಿಗೆಗೆ ಮಾಹಿತಿ ನೀಡುವ ಉದ್ದೇಶವಾಗಿದೆ ಎಂದರು.

ರಾಜ್ಯ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತರು, ಉದ್ಯಮಿ ಅರುಣ್ ಕುಮಾರ್ ರೈ ಡಿಂಬ್ರಿ ಹಾಗೂ ಪೇಸ್ ನ ಮಾಜಿ ಅಧ್ಯಕ್ಷರು, ತಿಂಗಳಾಡಿ ಪುತ್ತೂರಾಯ ಎಂಟರ್ ಪ್ರೈಸಸ್ ನ ಮಾಲಕ ಹರೀಶ್ ಪುತ್ತೂರಾಯ ಹಾಗೂ ಅವರ ಪತ್ನಿ ಗೀತಾ ಹರೀಶ್ ಪುತ್ತೂರಾಯರವರನ್ನು ಇದೇ ಸಂದರ್ಭದಲ್ಲಿ‌ ಸನ್ಮಾನಿಸಲಾಯಿತು. ವಿಶೇಷ ಸಾಧನೆಗಾಗಿ ಅದಿತಿ, ಆದಿತ್ಯ, ನಯನ, ನಂದನ ರವರನ್ನು ಗೌರವಿಸಲಾಯಿತು.

ಪೇಸ್ ನ ಮಾಜಿ ಅಧ್ಯಕ್ಷ ಹರೀಶ್ ಪುತ್ತೂರಾಯರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಹೃದಯ ತುಂಬಿ ಬಂದಿದೆ. ನಮ್ಮವರ ಒಳಗೆ ಗೌರವ ಸ್ವೀಕರಿಸುವುದು ಬಹಳಷ್ಟು ಕುಶಿಯ ವಿಷಯವಾಗಿದೆ. ಭಗವದ್ಗೀತೆ ತತ್ವವನ್ನು ಜೀವನದಲ್ಲಿ ಅಳವಡಿಸಿ ಮುನ್ನಡೆಯುವುದು ಒಳಿತು. ಗ್ರಾಹಕರ ಇಚ್ಚೆಗನುಗುಣವಾಗಿ ಕೆಲಸ ಕಾರ್ಯ ಮಾಡೋಣ ಎಂದರು.

ಪೇಸ್ ನ ಪೂರ್ವಾಧ್ಯಕ್ಷ ಅಕ್ಷಯ್ ಎಸ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೇಸ್ ನ ಮಾಜಿ ಅಧ್ಯಕ್ಷ ಹರೀಶ್ ಪುತ್ತೂರಾಯ ಹಾಗೂ ಹೃಷಿಕೇಶ್ ಸನ್ಮಾನ ಪತ್ರ ವಾಚಿಸಿದರು.
ಪ್ರಸನ್ನ ಭಟ್ ಬಲ್ನಾಡು ಪ್ರಾರ್ಥಿಸಿದರು. ಶಿವಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಾಂತ್ ಆಚಾರ್ ಅತಿಥಿಗಳ ಪರಿಚಯ ಮಾಡಿದರು. ಪೇಸ್ ನ ಅಧ್ಯಕ್ಷ ಸತ್ಯಗಣೇಶ್ ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಆಕಾಶ್ ವಂದಿಸಿದರು. ರವಿರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here