ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

‘ ಸಹಕಾರಿ ಕಾಯ್ದೆ ನಿಯಮದ ಪ್ರಕಾರ ನಿಧಿಗಳ ಮತ್ತು ಸದಸ್ಯರಿಗೆ ಲಾಭಾಂಶ ಹಂಚಿಕೆ, ಡಿಜಿಟಲ್ ಸಾಕ್ಷಾರತೆ ಮತ್ತು ಸೌಹಾರ್ದ ಠೇವಣಿ ಅಭಿಯಾನ ಯೋಜನೆಗೆ ಪ್ರಾಧ್ಯಾನತೆ’

ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ 2023-24 ನೇ ಸಾಲಿನ ಮಹಾಸಭೆಯು ಸೆ.18 ರಂದು ಸಹಕಾರಿಯ ಕಛೇರಿಯಲ್ಲಿ ಅಧ್ಯಕ್ಷ ಶ್ರೀನಿವಾಸ ಎಂ.ಸಿ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈರವರು ದೀಪ ಬೆಳಗಿಸುವ ಮೂಲಕ ಮಹಾಸಭೆಯನ್ನು ಉದ್ಘಾಟಿಸಿದರು. ಸಂಘವು ವರದಿ ಸಾಲಿನಲ್ಲಿ ಎ ತರಗತಿ ಸದಸ್ಯರು 1339 ಒಟ್ಟು ಪಾಲು ಬಂಡವಾಳ ರೂ.40,11,000 ಇದ್ದು ಸಹಕಾರಿ ಒಟ್ಟು ವಹಿವಾಟು ರೂ.12,48,26,059 ಮಾಡಿರುತ್ತದೆ. ಹಾಗೆಯೇ ಸಂಸ್ಥೆಯ ಸದಸ್ಯತ್ವದಲ್ಲಿ ಠೇವಣಾತಿ ಸ್ವೀಕಾರದಲ್ಲಿ ಹಾಗೂ ಸಹಕಾರಿಯ ದುಡಿಯುವ ಬಂಡವಾಳ ಹೆಚ್ಚಿಸುವಲ್ಲಿ ಸಂಘವು ಉತ್ತಮ ಸಾಧನೆ ಮಡಿ ಸಹಕಾರಿ ಸಂಘವು ನಿರಂತರ ನಾಲ್ಕು ವರ್ಷಗಳಿಂದ ಸದಸ್ಯರಿಗೆ ಡಿವಿಡೆಂಡ್ ವಿತರಣೆ ಹಾಗೂ ಲೆಕ್ಕ ಪರಿಶೋಧನಾ ಶ್ರೇಣಿಯಲ್ಲಿ ನಿರಂತರ ಎ ತರಗತಿ ಇರುತ್ತದೆ. ಸ್ವಸಹಾಯ ಸಂಘದ ಮುಖಾಂತರ ವ್ಯವಹಾರ ಪ್ರಾರಂಭ ಮಾಡಿ ವರದಿ ಸಾಲಿನಿಂದ ಆಭರಣ ಸಾಲ, ವೇತನ ಆಧಾರಿತ ಸಾಲ, ಗೃಹಸಾಲ, ಸ್ಥಿರಾಸ್ತಿ ಅಡಮಾನ ಸಾಲ, ವಾಹನ ಖರೀದಿ ಸಾಲ ಎಲ್ಲಾ ರೀತಿಯ ಸಾಲಗಳನ್ನು ಸದಸ್ಯರಿಗೆ ನೀಡಲಾಗುವುದು, ಸ್ವಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗ ಮತ್ತು ಅರ್ಥಿಕ ಜಾಗೃತಿಯ ಬಗ್ಗೆ ತರಬೇತಿ, ಡಿಜಿಟಲ್ ಸಾಕ್ಷರತೆ ಮತ್ತು ಡಿಜಿಟಲ್ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧ್ಯಕ್ಷ ಎಂ.ಸಿ ಶ್ರೀನಿವಾಸ ಹೇಳಿದರು.

ಸಹಕಾರಿ ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಪ್ರಾಸ್ತಾವಿಕಾವಾಗಿ ಸಹಕಾರಿ ಸಂಘದ ಉಪಾಧ್ಯಕ್ಷ ಎ.ಕೆ ಜಯರಾಮ ರೈ ಹೇಳಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಯಶವಂತ ಕುಮಾರ್ ಬಿ.ತಿಳುವಳಿಕೆ ಪತ್ರ ಮತ್ತು ಲೆಕ್ಕ ಪರಿಶೋಧಕ ಲೆಕ್ಕ ಪತ್ರ ಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು. 2022-23 ನೇ ಸಾಲಿನ ಮಹಾಸಭೆ ನಡವಳಿಕೆಯನ್ನು ನಿರ್ದೇಶಕ ಯಶೋಧರ ಜೈನ್, 2023-24 ನೇ ಸಾಲಿನ ಆಡಳಿತ ವರದಿ ಮತ್ತು ಸ್ವಾಗತ ಭಾಷಣವನ್ನು ನಿರ್ದೇಶಕ ಜಗಜ್ಜೀವನ್‌ದಾಸ್ ರೈ ಎ, 2024-25 ನೇ ಸಾಲಿಗೆ ತಯಾರಿಸಿದ ಅಂದಾಜು ಬಜೆಟ್ ಅನ್ನು ನಿರ್ದೇಶಕ ಆನಂದ ಎಂ.ಬೆಂಗಳೂರು, ಕಳೆದ ಮಹಾಸಭೆಗೆ ಮಂಜೂರಾತಿ ಪಡೆದ ಬಜೆಟ್‌ಗಿಂತ ಹೆಚ್ಚಾದ ಖರ್ಚಿನ ಬಗ್ಗೆ ನಿರ್ದೇಶಕ ಸಂದೀಪ್ ರೈ ಸಿ, 2023-24 ನೇ ಸಾಲಿನ ನಿವ್ವಳ ಲಾಭಾಂಶ ಹಂಚಿಕೆಯನ್ನು ನಿರ್ದೇಶಕ ಪ್ರಭಾಕರ ರೈ ಕೆ, ಆಡಳಿತ ಮಂಡಳಿ ಮತ್ತು ನೌಕರರ ಪಟ್ಟಿಯನ್ನು ನಗದು ಗುಮಾಸ್ತರಾದ ರಕ್ಷಿತ್ ಯು, 2024-25 ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿಯನ್ನು ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಸನ್ಮಾನ ಕಾರ್ಯಕ್ರಮ
ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈರವರ ಮುಖಾಂತರ ಸಹಕಾರಿಯ ಅಧ್ಯಕ್ಷ ಎಂ.ಸಿ ಶ್ರೀನಿವಾಸ, ಉಪಾಧ್ಯಕ್ಷ ಎ.ಕೆ ಜಯರಾಮ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ ಕುಮಾರ್ ಬಿ, ನಗದು ಗುಮಾಸ್ತರಾ ರಕ್ಷಿತ್ ಯುರವರುಗಳಿಗೆ ಸನ್ಮಾನ ಹಾಗೂ ಎಲ್ಲಾ ನಿರ್ದೇಶಕರುಗಳಿಗೆ ಶಾಲು ಹಾಕಿ ಸಲಹಾ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಗೌರವ ಸಲ್ಲಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹಕಾರಿ ಸಂಘದ ನಿರ್ದೇಶಕ ಅಕ್ಷಯ್ ರೈ ದಂಬೆಕ್ಕಾನ, ಆನಂದ ರೈ ಪಿ, ದೇವಪ್ಪ ಗೌಡ, ಬಾಬು ಗೌಡ, ಡಾ| ರಾಜೇಶ್ ಬೆಜ್ಜಂಗಳ, ಸುರೇಖಾ ಬಿ.ರೈ, ಗುಲಾಬಿ ಎನ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ವಿಶ್ವನಾಥ ನಾಯ್ಕ ಕೆ ವಂದಿಸಿದರು.

LEAVE A REPLY

Please enter your comment!
Please enter your name here