ಸವಣೂರು: ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಇಂಗ್ಲಿಷ್ ಸಂವಹನ ಕಾರ್ಯಗಾರವು ಸೆ.21ರಂದು ನಡೆಯಿತು.
ಈ ಕಾರ್ಯಗಾರವು 3 ಅವಧಿಯನ್ನು ಒಳಗೊಂಡಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಮಾಧವ ಭಟ್ ನಿವೃತ್ತ ಪ್ರಾಂಶುಪಾಲರು ವಿವೇಕಾನಂದಕಾಲೇಜು ಪುತ್ತೂರು, ರಶ್ಮಿ ಕೆ. ಇಂಗ್ಲಿಷ್ ಉಪನ್ಯಾಸಕರು ಅಕ್ಷಯ ಕಾಲೇಜು ಪುತ್ತೂರು, ರೊ.ಚಂದ್ರಹಾಸ ರೈ ಬಿ ನಿವೃತ್ತ ಇಂಗ್ಲಿಷ್ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಕಬಕ ಇವರು ಫಂಕ್ಷನಲ್ ಇಂಗ್ಲಿಷ್, ಎಪ್ಲಿಕೇಷನ್ ಆಫ್ ಕಮ್ಯುನಿಕೇಷನ್ ಹಾಗೂ ಕ್ರಿಯೇಟಿವಿಟಿ ಇನ್ ಕಮ್ಯುನಿಕೇಷನ್ ಎಂಬ ವಿಷಯಗಳ ಬಗ್ಗೆ ನಡೆಯಿತು. ಕಾರ್ಯಗಾರವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ನಾರಾಯಣ ಮೂರ್ತಿ ಕೆ. ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನೂ ಸಂಘದ ಸಂಘಟಕರಾದ ರಜನಿ ಸ್ವಾಗತಿಸಿ ಪ್ರಥಮ ಬಿ.ಸಿ.ಎ ವಿದ್ಯಾರ್ಥಿಯಾದ ಮಹಮ್ಮದ್ ಅನೀಸ್ ವಂದಿಸಿದರು. ಸಾಹಿತ್ಯ ಸಂಘದ ಸಂಘಟಕರಾದ ಶೇಷಗಿರಿ ಎಂ, ಕುಮಾರಿ.ತೇಜಸ್ವಿ ಹಾಗೂ ವಿದ್ಯಾರ್ಥಿ ಸಂಘಟಕರಾದ ತ್ರುತೀಯ ಬಿ.ಕಾಂ ವಿದ್ಯಾರ್ಥಿನಿ ಶ್ರಾವ್ಯವಾಣಿ, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಪ್ರಸ್ತುತಿ ಉಪಸ್ಥಿತರಿದ್ದರು. ಅಭಿಜ್ಞಾ ಮತ್ತು ಶ್ರಾವ್ಯವಾಣಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ನಿರ್ವಹಣೆಯನ್ನು ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಅಲೀಮತ್ ಸಝಾನ ನಿರ್ವಹಿಸಿದರು.