ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಕೈಗಾರಿಕಾ ಭೇಟಿ

0

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಕೈಗಾರಿಕಾ ಭೇಟಿ ಜರಗಿತು. ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದಲ್ಲಿ ಹಾಗೂ ಕೃಷಿ ವಲಯದಲ್ಲಿರುವ ಅವಕಾಶಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು.

ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಭೇಟಿ
ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಇವರು ಸ್ಥಾಪಿಸಿರುವ ಮಂಗಳೂರಿನ ಮಂಗಳಾ ನಿರ್ವಹಣಾ ಸಂಸ್ಥೆ ನಿರ್ವಹಿಸುತ್ತಿರುವ ತೆಂಕ ಎಡಪದವಿನಲ್ಲಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಘಟಕದ ನಿರ್ವಾಹಕ ಸಂತೋಷ್ ರವರು ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ತ್ಯಾಜ್ಯ ನಿರ್ವಹಣೆಯ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಯಾವುದೇ ತ್ಯಾಜ್ಯವು ನಿರುಪಯುಕ್ತವಲ್ಲ ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ಈ ಕೆಲಸ ಮಾಡುವ ಮೂಲಕ ಉದ್ಯಮದ ಜೊತೆ ಸಾಮಾಜಿಕ ಹೊಣೆಗಾರಿಕೆಯನ್ನು ನಾವು ನಿರ್ವಹಿಸುತ್ತಿದ್ದೇವೆ. ಇದರಿಂದಾಗಿ ಭೂಮಿ ಅಥವಾ ಸಮುದ್ರ ಮುಂತಾದ ಜಲಮೂಲಗಳನ್ನು ಸೇರುತ್ತಿದ್ದ ಟನ್ ಗಟ್ಟಲೆ ತ್ಯಾಜ್ಯ ಇಂದು ನಿರ್ವಹಣೆಯಾಗುವಲ್ಲಿ ಇಂತಹ ತ್ಯಾಜ್ಯ ನಿರ್ವಹಣಾ ಘಟಕಗಳು ಸಹಕಾರಿಯಾಗಿವೆ” ಎಂದು ಹೇಳಿದರು.

ಒಡ್ಡೂರು ಫಾರ್ಮ್ಸ್ ಗೆ ಭೇಟಿ
ವಿದ್ಯಾರ್ಥಿಗಳು ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ಒಡ್ಡೂರು ಫಾರ್ಮ್ಸ್‌ಗೆ ಭೇಟಿ ನೀಡಿದರು. ಒಡ್ಡೂರು ಫಾರ್ಮ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸಿ.ಎನ್.ಜಿ. ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ತಿಳಿದುಕೊಂಡರು. ಅದೇ ರೀತಿ ಒಡ್ಡೂರು ಫಾರ್ಮ್ಸ್‌ನ ಗೋಶಾಲೆ ಹಾಗೂ ಕೆರೆಯನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ದೇವಿ ಪ್ರಸಾದ್, ವಾಣಿಜ್ಯ ಸಂಘದ ಸಂಯೋಜಕ ಭಾಗ್ಯಶ್ರೀ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಸುಮಾರು 130 ವಿದ್ಯಾರ್ಥಿಗಳ ಒಂದು ತಂಡ ಕೈಗಾರಿಕಾ ಭೇಟಿಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here