ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

3.35 ಕೋಟಿ ರೂ ವ್ಯವಹಾರ , 2.19 ಲಕ್ಷ ರೂ. ಲಾಭ, ಶೇ.10 ಡಿವಿಡೆಂಡ್, ಪ್ರತಿ ಲೀ. ಹಾಲಿಗೆ 45 ಪೈಸೆ ಬೋನಸ್ ಘೋಷಣೆ

ಪುತ್ತೂರು: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ. 22 ರಂದು ಕುರಿಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಶಿಬರರವರು ಮಾತನಾಡಿ, ಸಂಘವು 2022-24ನೇ ಸಾಲಿನಲ್ಲಿ ವಾರ್ಷಿಕ 3ಕೋಟಿ 35 ಲಕ್ಷ 56 ಸಾವಿರ ರೂ ವ್ಯವಹಾರ ನಡೆಸಿ, 2 ಲಕ್ಷ, 19 ಸಾವಿರ ರೂ ಲಾಭಗಳಿಸಿದ್ದು, ಸದಸ್ಯರಿಗೆ 10 ಶೇಕಡಾ ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 45 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.


ಹೈನುಗಾರರಿಗೆ ಹೆಚ್ಚು ಲಾಭ ಇದೆ- ಶ್ರೀದೇವಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಮಾತನಾಡಿ ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಭಾಗದ ಹೈನುಗಾರರು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಬೇಕು ಎಂದು ಹೇಳಿದರು. ಹೈನುಗಾರರು ಪಶು ಹಿಂಡಿಯ ಜೊತೆಗೆ ಅಜೋಲವನ್ನು ಸಹ ನೀಡಬೇಕು, ಇದರಿಂದ ಹೈನುಗಾರರಿಗೆ ಹೆಚ್ಚು ಲಾಭ ಇದೆ. ಕೆಎಮ್ ಎಫ್ ಪಶು ಆಹಾರ ಅತ್ಯಂತ ಸಮತೋಲಿತ ಆಹಾರವಾಗಿದ್ದು, ಇದರ ಉಪಯೋಗದಿಂದ ಯಾವುದೇ ಕೆಚ್ಚಲುಬಾವು ರೋಗ ಹಸುಗಳಿಗೆ ಬರುವುದಿಲ್ಲ ಎಂದು ಹೇಳಿದರು.


ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರು :
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದರಲ್ಲಿ ಪ್ರಥಮ : ಚಿದಾನಂದ ಶೆಟ್ಟಿ, ದ್ವಿತೀಯ : ಶ್ರೀಧರ ಇಡೆಬೆಟ್ಟು, ತೃತೀಯ : ಮಮತಾರವರನ್ನು ಅಭಿನಂದಿಸಲಾಯಿತು.


ಸಂಘದ ನಿರ್ದೇಶಕರಾದ ಚಂದ್ರಹಾಸ್ ರೈ ಡಿಂಬ್ರಿ, ಚಂದ್ರಪ್ರಕಾಶ್ ಹೊಸಮಾರು, ವಿನೋದ್ ರೈ ಕುರಿಯ ಏಳ್ನಾಡುಗುತ್ತು, ಶಿವಶಂಕರ್ ಭಟ್ ಡೆಮ್ಮಾಲೆ, ಆನಂದ್ ಕುಮಾರ್ ಉಳ್ಳಾಲ, ಜಯಲಕ್ಷ್ಮಿ ಆರ್ ರೈ ಬೂಡಿಯಾರ್, ರಮ್ಯ ಪಡ್ಪು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ನಿರ್ದೆಶಕ ಗಣೇಶ್ ಬಂಗೇರ ಕೊರಂಗು ಸ್ವಾಗತಿಸಿ, ಸಂಘದ ಕಾರ‍್ಯದರ್ಶಿ ಲೋಕೇಶ್ ನೈತ್ತಾಡಿ ವರದಿ ವಾಚಿಸಿ, ಕಾರ‍್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ಸದಸ್ಯರುಗಳಾದ ಚಿದಾನಂದ ಶೆಟ್ಟಿ, ಡಾ.ರಮೇಶ್ ರವರು ಸಲಹೆ ಸೂಚನೆಯನ್ನು ನೀಡಿದರು. ಸಂಘದ ಶಾಖಾ ಸಿಬ್ಬಂದಿ ಜೈನುಲ್ ಅಬಿದ್ ನೈತ್ತಾಡಿ, ಹಾಲು ಪರೀಕ್ಷಕಿ ಪ್ರತಿಮಾ ಡಿಂಬ್ರಿರವರು ಸಹಕರಿಸಿದರು

ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಿ
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘವು ಎಲ್ಲಾ ಹೈನುಗಾರರು ಮತ್ತು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಹಾಲು ಒಕ್ಕೂಟದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಹೈನುಗಾರರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಹೈನುಗಾರರು ಸಹಕರಿಸಬೇಕು.
ಗಣೇಶ್ ಶೆಟ್ಟಿ ಶಿಬರ, ಉಪಾಧ್ಯಕ್ಷರು , ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ

LEAVE A REPLY

Please enter your comment!
Please enter your name here