ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ಲಿಲ್ಲಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಮತ್ತು ಉಜಿರೆ ಹಾಗೂ ಕಲ್ಲಡ್ಕದಲ್ಲಿ ಶಾಖಾ ಕಚೇರಿಗಳನ್ನು ಹೊಂದಿರುವ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.22ರಂದು ಪುತ್ತೂರು ಪಶು ಆಸ್ಪತ್ರೆ ಬಳಿಯಿರುವ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ದ ಸಹಕಾರ ಜ್ಯೋತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಪಿ ಬಿ ಇಂದುಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಒಟ್ಟು 4098 ಸದಸ್ಯರನ್ನು ಹೊಂದಿರುವ ಸಂಘವು, 8 ಕೋಟಿ 42 ಲಕ್ಷ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು, 2023-24ನೇ ಸಾಲಿನಲ್ಲಿ ರೂ.33 ಕೊಟಿ.82.ಲಕ್ಷ ರೂಪಾಯಿಗಳ ವ್ಯವಹಾರನ್ನು ನಡೆಸಿ ಸಂಘವು ಒಟ್ಟು ರೂ. 15,28,627.68 ಲಾಭವನ್ನು ಗಳಿಸಿದೆ. ಸಂಘದ ಸದಸ್ಯರಿಗೆ ಈ ಸಂದರ್ಭದಲ್ಲಿ ಶೇ.9 ಡಿವಿಡೆಂಡ್ ಅನ್ನು ಸಂಘದ ಅಧ್ಯಕ್ಷರು ಘೋಷಿಸಿದರು.
ಈ ಸಂದರ್ಭದಲ್ಲಿ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಇಂದು ಶೇಖರ್ ಅವರು, ಸರ್ವ ಸದಸ್ಯರ ಸಹಕಾರದಿಂದ ಸಂಘವು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ಎಲ್ಲರ ಬೆವರ ಹನಿಯಿಂದ ಸಂಘದ ಬೆಳವಣಿಗೆ ಸಾಧ್ಯವಾಗಿದೆ. ಪುತ್ತೂರು, ಉಜಿರೆ ಮತ್ತು ಕಲ್ಲಡ್ಕದಲ್ಲಿ ಸಂಘವು ಕಾರ್ಯಾಚರಿಸುತ್ತಿದ್ದು, ಈ ಭಾಗದಲ್ಲಿರುವ ಸಮಾಜ ಬಾಂಧವರು ತಮ್ಮ ಆರ್ಥಿಕ ವ್ಯವಹಾರಗಳನ್ನು ನಮ್ಮ ಸಂಘದಲ್ಲೇ ಮಾಡುವಂತೆ ಅವರು ಇದೇ ಸಂದರ್ಭದಲ್ಲಿ ವಿನಂತಿ ಮಾಡಿಕೊಂಡರು.
ಮುಂಬರುವ ದಿನಗಳಲ್ಲಿ ಪುತ್ತೂರಿನಲ್ಲಿ ಸಂಘವು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಇದಕ್ಕೆ ಸುಮಾರು 1.5 ಕೋಟಿ ರೂಪಾಯಿ ಅಗತ್ಯವಿದ್ದು ಎಲ್ಲರೂ ಸಹಕಾರದೊಂದಿಗೆ ಈ ಕನಸನ್ನು ನನಸು ಮಾಡುವ ಯೋಜನೆಯಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಸಂಘದ ಸದಸ್ಯರು ಈ ಸಂಘದಲ್ಲಿ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು ತಮ್ಮ ಮೊಬೈಲ್ ನಲ್ಲಿ ವಾಟ್ಸ್ಯಾಪ್ ಸ್ಟೇಟಸ್ ಹಾಕುವ ಮೂಲಕ ಈ ಸಂಘದ ವ್ಯವಹಾರ ಚಟುವಟಿಕೆಗಳನ್ನು ಪ್ರಚಾರ ಪಡಿಸುವಂತೆ ಅವರು ವಿನಂತಿಸಿದರು.
ಸಂಘದ ಉಪಾಧ್ಯಕ್ಷರಾಗಿರುವ ಪಿ.ಎನ್. ಸುಭಾಸ್ ಚಂದ್ರ, ನಿರ್ದೇಶಕರುಗಳಾದ ಸುಬ್ಬಣ್ಣ ನೂಜಿ, ಬಾಬು ಹೆಚ್., ರಘುನಾಥ ನೆಲ್ಯಾಡಿ, ಜಯಂತ ಮುಂಡಾಜೆ, ಸುರೇಶ್ ಬೈಂದೂರು, ಶೋಭಾ ಸೀತಾರಾಮ, ಡಾ. ಯಾದವಿ ಜಯಕುಮಾರ್, ಜಯಂತ್ ಬೇಕಲ್ ಮತ್ತು ಈಶ್ವರ ಡಿ. ವಿಟ್ಲ ಹಾಗೂ ಪ್ರಭಾರ ಕಾರ್ಯದರ್ಶಿ ನಿಶಾಂತ್ ಡಿ. ಈ ಮಹಾಸಭೆಯಲ್ಲಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸಂಘದಿಂದ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮಾನ್ಯ, ದೇವಿಕಾ, ವಂಶಿ ಮತ್ತು ನಿಹಾರಿಕ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಪ್ರಾರಂಭಗೊಂಡಿತು. ಅಧ್ಯಕ್ಷರಾಗಿರುವ ಇಂದು ಶೇಖರ್ ಅವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದೀಕ್ಷಿತಾ ಪಿ. ವಂದನಾರ್ಪಣೆ ಮಾಡಿದರು, ಉಜಿರೆ ಶಾಖಾ ವ್ಯವಸ್ಥಾಪಕರಾಗಿರುವ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿವರ್ಗದವರು ಸಹಕರಿಸಿದರು.