ನೃತ್ಯಾಂತರಂಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ಆಶೀಂಬಂಧು ಭಟ್ಟಾಚಾರ್ಯರಿಂದ ಕಥಕ್ ಕಾರ್ಯಕ್ರಮ

0

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇತ್ತೀಚೆಗೆ ಆಯೋಜಿಸಿದ ನೃತ್ಯಾಂತರಂಗ 117ನೇ ಸರಣಿಯಲ್ಲಿ ದೇಶದ ಓರ್ವ ಹಿರಿಯ ಕಲಾವಿದ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಗುರು ಕೋಲ್ಕತ್ತದ ಆಶೀಂಬಂಧು ಭಟ್ಟಾಚಾರ್ಯರಿಂದ ಕಥಕ್ ಕಾರ್ಯಕ್ರಮ – ‘ಕಥಕ್-ಕಥಾ’ ಎಂಬ ಶೀರ್ಷಿಕೆಯಲ್ಲಿ ಅಭೂತಪೂರ್ವವಾಗಿ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಆಶೀಂರವರು ಕಥಕ್ ನೃತ್ಯದ ಸಂಪೂರ್ಣ ಮಾಹಿತಿ ನೀಡುವ ಜೊತೆಗೆ ವಿವಿಧ ಶೈಲಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಅಭ್ಯಾಗತರಾಗಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ವಕೀಲರಾದ ಶ್ರೀ ವಿಕ್ರಂ ಪಡುವೆಟ್ನಾಯ ಶುಭನುಡಿಗಳನ್ನಾಡಿದರು.

LEAVE A REPLY

Please enter your comment!
Please enter your name here