ಪುತ್ತೂರು: ವಿಟ್ಲ ಸಮೀಪದ ಮಂಚಿ ನೂಜಿಬೈಲ್ ನಿವಾಸಿಯಾಗಿರುವ ಬಿಜೆಪಿ ಮುಖಂಡ ವಿಕಾಸ್ ಪುತ್ತೂರುರವರ ತಂದೆ ಪ್ರಭಾಕರ ಬೋರ್ಕರ್ ಮುಂಗ್ಲಿಕಾನ (72ವ)ರವರು ಹೃದಯಾಘಾತದಿಂದ ಸೆ.23 ರಂದು ಲಂಡನ್ ನಲ್ಲಿರುವ ತನ್ನ ಪುತ್ರಿಯ ಮನೆಯಲ್ಲಿ ನಿಧನರಾದರು.
ಮೂಲತಃ ಕಾಟುಕುಕ್ಕೆ ಮುಂಗ್ಲಿಕಾನ ನಿವಾಸಿಯಾಗಿದ್ದ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ. ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಸ್ವಯಂನಿವೃತ್ತಿ ಪಡೆದಿದ್ದರು. ಇವರ ಪತ್ನಿ ವಸಂತಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಉದ್ಯೋಗಿಯಾಗಿದ್ದು, ಸ್ವಯಂ ನಿವೃತ್ತಿ ಪಡೆದಿದ್ದರು. ಪತಿ ಮತ್ತು ಪತ್ನಿ 3 ತಿಂಗಳ ವಿಸಿಟಿಂಗ್ ವೀಸಾದಲ್ಲಿ ಲಂಡನ್ ನಲ್ಲಿರುವ ಪುತ್ರಿ ಪ್ರಜ್ಞಾ ರವರ ಮನೆಗೆ ತೆರಳಿದ್ದರು. ಅಲ್ಲಿ ಪ್ರಭಾಕರ ಬೋರ್ಕರ್ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.