





ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದ.ಕ ಜಿಲ್ಲೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಂಗ ಸಂಸ್ಥೆಯಾದ ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಇದರ ಆಶ್ರಯದಲ್ಲಿ ತೆಂಕಿಲದಲ್ಲಿ ನಡೆದ ತಾಲ್ಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವಿ ಪೂರ್ವ ವಿಭಾಗದ ಬಾಲಕಿಯರ ತಂಡವು ವಿಜೇತಗೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.


ತರಬೇತಿದಾರ ಮನೋಜ್‌ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಶಿಕ್ಷಕರಾದ ಲತಾಶ್ರೀ ಮತ್ತು ಹರ್ಷಿತ ಪ್ರೋತ್ಸಾಹ ನೀಡಿದ್ದರು. ಸ್ವಾತಿ ಎ.ಎಸ್ ತಂಡದ ನಾಯಕಿಯಾಗಿ ಉತ್ತಮ ಹೊಡೆತಗಾರ್ತಿಯಾಗಿ ಹರ್ಷ , ಉತ್ತಮ ಎತ್ತುವಗಾರ್ತಿಯಾಗಿ ಭವ್ಯಶ್ರೀ ಪ್ರಶಸ್ತಿ ಪಡೆದುಕೊಂಡರು. ನಯನಶ್ರೀ, ಬಿಷ್ಮಾ, ಎಂ. ಎನ್ ರೀತಿಕಾ, ಅರ್ಪಿತಾ, ಸಾತ್ವಿ ತಂಡದಲ್ಲಿದ್ದರು.












