ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ ವಾರ್ಷಿಕ ಮಹಾಸಭೆ

0

ರೂ.2,05,59,604.14 ಲಾಭ – 16% ಡಿವಿಡೆಂಡ್‌ ಘೋಷಣೆ

ವಿಟ್ಲ: ಸಂಘವು ವರದಿ ಸಾಲಿನಲ್ಲಿ ರೂ. 617ಕೋಟಿ ವ್ಯವಹಾರ ನಡೆಸಿ ರೂ. 2.05ಕೋಟಿ ಲಾಭ ಗಳಿಸಿದೆ. 

ರೂ 5.48ಕೋಟಿ  ಪಾಲು ಬಂಡವಾಳವಿದ್ದು,  ವರ್ಷಾಂತ್ಯಕ್ಕೆ 4,746 ಎ ತರಗತಿ ಸದಸ್ಯರನ್ನು ಹೊಂದಿದ್ದು, 194ಕೋಟಿ ಠೇವಣಿ ಹೊಂದಿರುತ್ತದೆ. 182.76ಕೋಟಿ ಹೊರಬಾಕಿ ಸಾಲ ಇದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದು.ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯಲು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ  ಎಂದು ಅಧ್ಯಾಪಕರ ಸಹಕಾರಿ ಸಂಘ  ವಿಟ್ಲ ಇದರ ಅಧ್ಯಕ್ಷರಾದ ರಮೇಶ್ ನಾಯಕ್ ಕೆ.ರವರು ಹೇಳಿದರು.

ಅವರು ವಿಟ್ಲ ವಿಠಲ ಪದವಿ ಪೂರ್ವಕಾಲೇಜಿನ ಸುವರ್ಣರಂಗ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ‌ ವಹಿಸಿ ಮಾತನಾಡಿದರು. 

ಸಂಘದ ವ್ಯವಹಾರದ ಬಗ್ಗೆ  ಸಾಲದ ಮಿತಿ ಹೆಚ್ಚಿಸುವ ಬಗ್ಗೆ ಚರ್ಚಿಸಿ ತುರ್ತು ಸಾಲ ರೂ.7 ಲಕ್ಷ, ಹಾಗೂ ದೀರ್ಘಾವಧಿ ಸಾಲ ರೂ.18 ಲಕ್ಷ ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸದಸ್ಯರಿಗೆ ಎಲ್ಲಾ ಶಾಖೆಗಳಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿರುವುದಾಗಿ ಮಾಹಿತಿ ನೀಡಲಾಯಿತು. 

ವಿಟ್ಲ, ಜೋಡುಮಾರ್ಗ, ಪುತ್ತೂರು, ಬೆಳ್ತಂಗಡಿ, ಮೂಡಬಿದ್ರೆ, ಸುಳ್ಯ, ಮೂಲ್ಕಿ , ಸುಬ್ರಹ್ಮಣ್ಯ ಮತ್ತು ಸಂಘದ 9ನೇ ಶಾಖೆ ಮಂಗಳೂರಿನ ಬಲ್ಮಠದ ಒಬರ್ಲೆಟವರ್ಸ್ ನಲ್ಲಿ ಎಪ್ರಿಲ್ ತಿಂಗಳ 2024ರಿಂದ ನೂತನವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಲಾಯಿತು. 

ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಯಿತು.ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ಸದಸ್ಯರಾಗಿದ್ದು ಮರಣ ಹೊಂದಿದ 19 ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು.

ಸಂಘದ ಜನರಲ್ ಮೆನೇಜರ್‌ ಸುಚಿನ್‌  ರಾಜ್ ಶೆಟ್ಟಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ  ಉಮನಾಥ ರೈ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ರಾಜೇಂದ್ರ ರೈ ಪಿ., ನಿರ್ದೇಶಕರಾದ  ಮೋನಪ್ಪ ಕೆ, ಡಾ|| ನವೀನ್‌ಕೊಣಾಜೆ, ಕಮಲಾಕ್ಷ,  ಚಿತ್ರಕಲಾ ಕೆ,  ಸಂಜೀವ ಎಚ್,  ಸುರೇಶಕುಮಾರ್ ಪಿ.ಎಮ್., ಇಂದುಶೇಖರ್, ಜಯರಾಮ, ರಾಮಕೃಷ್ಣರಾವ್,  ಕೆ. ಗಂಗಾಧರ ಆಳ್ವ , ಪುಷ್ವರಾಜ್ ಬಿ.,  ಉಮ್ಮರಗಿ ಶರಣಪ್ಪ,  ಅನಿತಾ ಮಿನೇಜಸ್,  ನವೀನ್ ಪಿ.ಎಸ್.  ಭಾರತಿ ಮೊದಲಾದವರು ಉಪಸ್ಥಿತರಿದ್ದರು. 

ಸಂಘದ ಅಧ್ಯಕ್ಷರಾದ  ರಮೇಶ್‌ ನಾಯಕ್ ಕೆ.  ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ರಾಜೇಂದ್ರ ರೈ ವಂದಿಸಿದರು.

LEAVE A REPLY

Please enter your comment!
Please enter your name here