ಮಂಗಳೂರು/ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿರುವ ಕ್ಯಾ| ಬ್ರಿಜೇಶ್ ಚೌಟ ಅವರು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ವುಮ್ ಲುನ್ ಮ್ಯಾಂಗ್ ವುಲ್ನಾಮ್ IAS ಅವರನ್ನು ಭೇಟಿಯಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀ ವೈಮಾನಿಕ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವಂತೆ ಮನವಿ ಸಲ್ಲಿಸಿದರು.
ಮಳೆಗಾಲದ ಸಂದರ್ಭದಲ್ಲಿ ಘಾಟಿ ರಸ್ತೆಗಳ ಸಮಸ್ಯೆಗಳಿಂದಾಗಿ ಕರಾವಳಿ ಮತ್ತು ಬೆಂಗಳೂರು ಸಹಿತ ಹೊರ ಜಿಲ್ಲೆಗಳಿಗೆ ರಸ್ತೆ ಮಾರ್ಗ ಮತ್ತು ರೈಲು ಮಾರ್ಗ ಸೇವೆಗಳು ಬಾಧಿತವಾಗುವ ಕಾರಣದಿಂದ ತುರ್ತು ಪ್ರಯಾಣಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರಾವಳಿ ಮತ್ತು ರಾಜ್ಯ ಹಾಗೂ ದೇಶದ ಇತರೇ ಭಾಗಗಳ ಸಂಪರ್ಕಕ್ಕೆ ಹೊಸ ವಿಮಾನ ಮಾರ್ಗಗಳನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಚೌಟ ಅವರು ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.