ಕಬಕ ಸುಲ್ತಾನ್‌ನಗರ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್‌ಗೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಅಂಫಲ್, ಪ್ರ.ಕಾರ್ಯದರ್ಶಿಯಾಗಿ ಅಬೂಬಕ್ಕರ್, ಕೋಶಾಧಿಕಾರಿಯಾಗಿ ಸುಲ್ತಾನ್ ಆಯ್ಕೆ

ಪುತ್ತೂರು: ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಸುಲ್ತಾನ್ ನಗರ ಕಬಕ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾದ ಬಶೀರ್ ಮದನಿ ದುವಾ ನೆರವೇರಿಸಿದರು. ಸಮಿತಿಯ ನೂತನ ಅಧ್ಯಕ್ಷರಾಗಿ ಅಂಫಲ್ ಸುಲ್ತಾನ್ ನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಅವರು ಆಯ್ಕೆಯಾದರು.

ಕೋಶಾಧಿಕಾರಿಯಾಗಿ ಸಲ್ಮಾನ್ ಸುಲ್ತಾನ್‌ನಗರ, ಉಪಾಧ್ಯಕ್ಷರಾಗಿ ಇಮ್ತಿಯಾಝ್, ಜೊತೆ ಕಾರ್ಯದರ್ಶಿಯಾಗಿ ಫಾರೂಕ್ ಕೆ ಫೈರೋಝ್, ಲೆಕ್ಕ ಪರಿಶೋಧಕರಾಗಿ ಅನ್ಸಾರ್ ಆಯ್ಕೆಯಾದರು. ಉಸ್ತುವಾರಿಯಾಗಿ ಫರ್ಸಾನ್, ಖಾಲಿದ್, ಶಂಸುದ್ದೀನ್, ಫಾಯಿಝ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಮುಂದಿನ ಯೋಜನೆಯ ಬಗ್ಗೆ ಬಶೀರ್ ಮದನಿ ಸಲಹೆ ಸೂಚನೆಯನ್ನು ನೀಡಿದರು. ಪ್ರ.ಕಾರ್ಯದರ್ಶಿಯಾದ ಅಬೂಬಕ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here