ಪುತ್ತೂರು: ಬಿಜೆಪಿ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ಮನ್ ಕಿ ಬಾತ್‌ನ ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರ ಪ್ರಮುಖರ ಸಭೆಯು ಸೆ.25ರಂದು ಪುತ್ತೂರು ಬಿಜೆಪಿ ಕಛೇರಿ ಯಲ್ಲಿ ನಡೆಯಿತು.
ಈ ಸಂದರ್ಭ ಗ್ರಾಮಾಂತರ ಮತ್ತು ನಗರ ಮಂಡಲದ ಮನ್ ಕಿ ಬಾತ್ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಘೋಷಣೆ ಮಾಡಲಾಯಿತು.
ಪಂಡಿತ್ ದೀನ್ ದಯಾಳ್ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪರ್ಚನೆ ಮಾಡಿದ ಬಳಿಕ ಜಿಲ್ಲಾ ಮನ್ ಕಿ ಬಾತ್ ಸಂಚಾಲಕ ದೇವಪ್ಪ ಪೂಜಾರಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಬಿಜೆಪಿ ಸದಸ್ಯತ ಮತ್ತು ಮನ್ ಕಿ ಬಾತ್ ಯಶಸ್ವಿಗೊಳಿಸುವ ಬಗ್ಗೆ ಸಭೆಯಲ್ಲಿ ಮಾತಾಡಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಮತ್ತು ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಮಂಡಲದ ಸಂಚಾಲಕ ಪುರುಷೋತ್ತಮ್ ಮುಂಗ್ಲಿಮನೆ, ನಗರ ಮಂಡಲದ ಸಂಚಾಲಕ ದೀಕ್ಷಾ ಪೈ ಸಭೆಯಲ್ಲಿ ಉಪಸ್ಥಿತರಿದ್ದರು. ಸಹ ಸಂಚಾಲಕ ಮಹೇಶ್ ಕೇರಿ, ಸುನಿಲ್ ದಡ್ದು, ಪ್ರೇಮ ನಂದಿಲ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮನ್ ಕಿ ಬಾತ್ ಮಹಾಶಕ್ತಿ ಕೇಂದ್ರ ಸಂಚಾಲಕರನ್ನು ಮತ್ತು ಶಕ್ತಿ ಕೇಂದ್ರ ಪ್ರಮುಖರನ್ನು ಶಾಲು ಹಾಕಿ ಗುರುತಿಸಲಾಯಿತು.
ಮನ್ ಕಿ ಬಾತ್ ಮಹಾಶಕ್ತಿ ಕೇಂದ್ರಗಳ ಪ್ರಮುಖ ಘೋಷಣೆ:
ಗ್ರಾಮಾಂತರ ಮಂಡಲದ ಮನ್ ಕಿ ಬಾತ್ ಮಹಾಶಕ್ತಿ ಕೇಂದ್ರಗಳ ಪ್ರಮುಖರನ್ನು ಘೋಷಣೆ ಮಾಡಲಾಗಿದ್ದು, ವಿಟ್ಲ ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ರಕ್ಷತಾ ಸನತ್, ಪುಣಚ ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಸುಮಿತ್ರಾ ಪೆರ್ನೆ, ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಉಷಾ ಮುಳಿಯ, ಆರ್ಯಾಪು ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಮೀನಾಕ್ಷಿ ಮಂಜುನಾಥ್, ನರಿಮೊಗರು ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಪವಿತ್ರಾ ಗೌಡ ಕೆ. ಪಿ, ನೆಟ್ಟಣಿಗೆಮುಡ್ನೂರು ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಪ್ರಪುಲ್ಲ ರೈ ಮತ್ತು 46 ಶಕ್ತಿ ಕೇಂದ್ರ ಪ್ರಮುಖರನ್ನು ಗ್ರಾಮಾಂತರ ಮಂಡಲ ಅಧ್ಯಕ್ಷರು ಶಾಲು ಹಾಕಿ ಅಭಿನಂದಿಸಿದರು. ಬಿಜೆಪಿ ನಗರ ಮಂಡಲದ ಬೊಳುವಾರು ಮಹಾಶಕ್ತಿ ಕೇಂದ್ರದ ಸಂಚಾಲಕರಾಗಿ ಕುಸುಮ ಚಂದಪ್ಪ, ದರ್ಬೆ ಮಹಾಶಕ್ತಿ ಕೇಂದ್ರ ಸಂಚಾಲಕರಾಗಿ ಸುಪ್ರಭಾ ನಾಯಕ್ ಅವರನ್ನು ಘೋಷಣೆ ಮಾಡಲಾಯಿತು. ಇದೇ ಸಂದರ್ಭ ಶಕ್ತಿ ಕೇಂದ್ರ ಪ್ರಮುಖರನ್ನು ನಗರ ಮಂಡಲದ ಅಧ್ಯಕ್ಷರು ಶಾಲು ಹಾಕಿ ಅಭಿನಂದಿಸಿದರು.