ಪುತ್ತೂರು: ಜಗನ್ಮಾತೆಯನ್ನು ನವರೂಪಗಳಲ್ಲಿ ನವವಿಧಗಳಲ್ಲಿ ಭಕ್ತಿ ಭಾವದಿಂದ ಆರಾಧಿಸುವ ಆಚರಣೆಯೇ ನವರಾತ್ರಿ ಅಥವಾ ಇದನ್ನೇ ಶರನ್ನವರಾತ್ರಿ ಎಂದು ಕರೆಯುತ್ತಾರೆ. ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಬತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ. ಈ ಒಂಬತ್ತು ರೂಪಗಳೆಂದರೆ ಶೈಲಪುತ್ರಿ,ಬ್ರಹ್ಮಚಾರಿಣಿ, ಚಂದ್ರಘಂಟಾ,ಕೂಷ್ಮಾಂಡಾ,ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ,ಮಹಾಗೌರಿ ಮತ್ತು ಸಿದ್ದಿರಾತ್ರಿ.ಕರಾವಳಿಯಲ್ಲಿ ನವರಾತ್ರಿ ಆಚರಣೆಗೆ ವಿಶೇಷ ಮಹತ್ವವಿದೆ. ಇಲ್ಲಿ ಹಲವು ಕಡೆಗಳಲ್ಲಿ ನವರಾತ್ರಿ ಆರಾಧನೆಯನ್ನು ವಿಶೇಷ ಭಕ್ತಿ ಭಾವದಿಂದ ಆಚರಿಸಲಾಗುತ್ತಿದ್ದು ಅದರಂತೆ ಪುತ್ತೂರಿನ ಬೊಳುವಾರಿನಲ್ಲಿರುವ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲೂ ಅ.3 ಪ್ರಾರಂಭವಾಗಿ ಅ.11ರವರೆಗೆ ನವರಾತ್ರಿ ಉತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ವಿವಿಧ ಸಾಂಸ್ಕ್ರತಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳು: 1939 ನೇ ಇಸವಿಯ ಲಾಗ್ಯಾತು ಪ್ರತೀ ವರ್ಷ ವಾಡಿಕೆಯಂತೆ ನಡೆಸಿಕೊಂಡು ಬರುವ ನವರಾತ್ರಿ ಉತ್ಸವದ 85 ನೇ ವರ್ಷದ ನವರಾತ್ರಿ ಪೂಜೆಗಳನ್ನು ಅ.3ರಂದು ಗುರುವಾರ ಬೆಳಿಗ್ಗೆ ಗಂಟೆ 7ಕ್ಕೆ ನವರಾತ್ರಿ ಕಲಶ ಪ್ರತಿಷ್ಠೆಯೊಂದಿಗೆ ಪ್ರಾರಂಭಿಸಿ ನಂತರ ಪ್ರತಿನಿತ್ಯ ಭಜನೆ ಹಾಗು ರಾತ್ರಿ 9:30 ಗೆ ಮಹಾಪೂಜೆ , ಅ.11 ಶುಕ್ರವಾರ ರಾತ್ರಿ ಗಂಟೆ 12 ಕ್ಕೆ ಮುಕ್ತಾಯದ ಶ್ರೀ ಮಹಾಶಕ್ತಿ ಪೂಜೆ ನಡೆಯಲಿದೆ.
ಅ.3 ಗುರುವಾರ ಸಂಜೆ 6 ರಿಂದ ವಿಶ್ವಹಿಂದೂ ಪರಿಷತ್ ಮಾತ್ರ್ ಶಕ್ತಿಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಅ.4 ಶುಕ್ರವಾರ ಸಂಜೆ 6 ಕ್ಕೆ ಪುತ್ತೂರು ಮಹಿಳಾ ಮಂಡಳಿಯವರಿಂದ ಶ್ರೀ ಲಲಿತಾ ಸಹಸ್ರನಾಮ ಪಠಣ ಬಳಿಕ ಭಜನಾ ಕಾರ್ಯಕ್ರಮ, ಅ.5 ಶನಿವಾರ ಸಂಜೆ 7ರಿಂದ ಒಡಿಯೂರು ವಜ್ರಮಾತ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ ,ಅ.6 ರವಿವಾರ ರಾತ್ರಿ ಗಂಟೆ 7: 30ರಿಂದ ಮೂಡಾಯೂರು ಶ್ರೀ ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ರೋಫೋನು ವಾದನ, ಅ.7 ಸೋಮವಾರ ಸಂಜೆ 6:30ರಿಂದ ಸಭಾ ಕಾರ್ಯಕ್ರಮ, 7:30 ರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ಗಾನಕೋಗಿಲೆ ಪುತ್ತೂರು ಚಂದ್ರಶೇಖರ ಹೆಗ್ಡೆಯವರ ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ ಪುತ್ತೂರು ಇವರಿಂದ ಸಂಗೀತ ರಸಮಂಜರಿ ಹಾಗು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ, ದಿ 8 ಮಂಗಳವಾರ ಸಂಜೆ ಗಂಟೆ 4:30 ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಮತ್ತು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು- ಪುತ್ತೂರು ವತಿಯಿಂದ ಬೊಳುವಾರು ಪುತ್ತೂರು ನಗರದ ಮೈದಾನಿನಲ್ಲಿ ಯಕ್ಷಗಾನ ತಾಳಮದ್ದಳೆ, ದಿ 9 ಬುಧವಾರ ಸಂಜೆ ಗಂಟೆ 6:30 ರಿಂದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುತ್ತೂರು ಇದರ ನಾಟ್ಯಗುರುಗಳಾದ ಶ್ರೀ ಗಣೇಶ್ ಪಾಲೆಚ್ಪಾರ್ ಇವರ ಶಿಷ್ಯರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ಹನುಮದ್ವಿಲಾಸ ಎಂಬ ಯಕ್ಷಗಾನ ಪ್ರದರ್ಶನ , ಅ.10 ಗುರುವಾರ ಸಂಜೆ 6:30 ರಿಂದ ಶ್ರೀ ದೇವಿ ಮಹಿಳಾ ಯಕ್ಷತಂಡ ಬಾಲವನ ಪುತ್ತೂರು ಇವರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ಮಹಿಷವಧೆ ಯಕ್ಷಗಾನ ಪ್ರದರ್ಶನ, ಅ.11 ಶುಕ್ರವಾರ ರಾತ್ರಿ ಗಂಟೆ 7 ರಿಂದ ದಿ|ಗಂಗಣ್ಣ ಮತ್ತು ದಿ| ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ ಮತ್ತು ಬಳಗದವರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ತಾಲೀಮು ಬೆಂಕಿಯಾಟ ಪ್ರದರ್ಶನ ಹುಲಿಯಾಟ ಪ್ರದರ್ಶನ , ರಾತ್ರಿ ಗಂಟೆ 9: 30 ರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಪುತ್ತೂರು ಇವರಿಂದ ಬಾರಿಸು ಕನ್ನಡ ಡಿಂಡಿಮವ, ರಾತ್ರಿ ಗಂಟೆ 10:30 ರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನಿನಲ್ಲಿ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಕಿಯವರಿಂದ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ಶಬರಿಮಲೆ ಅಯ್ಯಪ್ಪ , ಅ.11 ಶುಕ್ರವಾರ ಉರ್ಲಾಂಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಮತ್ತು ಶ್ರೀ ಸರಸ್ವತಿ ಭಜನಾ ಮಂಡಳಿಯ ನೆರವಿನೊಂದಿಗೆ ಶ್ರೀ ಮಂತ್ರಾಲಯಕ್ಕೆ ಉಲ್ಬೆಯನ್ನು ತಂದು , ರಾತ್ರಿ ಗಂಟೆ 8:30ಕ್ಕೆ ಶ್ರೀ ಮಂತ್ರಾಲಯದಿಂದ ಶ್ರೀ ದೇವಿಯ ಉತ್ಸವ , ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಶ್ರೀ ವೆಂಕಟ್ರಮಣ ದೇವಸ್ಥಾನ ಮಾರ್ಕೆಟ್ ರಸ್ತೆಯಾಗಿ ಪುನಃ ಶ್ರೀ ಮಂತ್ರಾಲಯಕ್ಕೆ ಬಂದು ಶ್ರೀ ಮಹಾಶಕ್ತಿ ಪೂಜೆ ಬಳಿಕ ಮಹಾಪ್ರಸಾದದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡು , ಅ12 ಶನಿವಾರ ಬೆಳಿಗ್ಗೆ 8:15 ಕ್ಕೆ ಕಲಶ ವಿಸರ್ಜನೆಗೊಳ್ಳಲಿದೆ , ಭಕ್ತಾದಿಗಳು ಆದಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ನವರಾತ್ರಿ ಉತ್ಸವದಲ್ಲಿ ಬಾಗಿಯಾಗಬೇಕಾಗಿ ವ್ಯವಸ್ಥಾಪನ ಮಂಡಳಿಯು ತಿಳಿಸಿದೆ.
ನವರಾತ್ರಿ ಆಚರಣೆಯ ವಿಶೇಷ: ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಆರಂಭವಾಗುತ್ತದೆ.ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ.ಎರಡನೆಯ ದಿನದಂದು ಲಕ್ಷ್ಮೀ ಪೂಜೆ , ಮೂರನೆಯ ದಿನದಂದು ಮಹಿಷಾಸುರಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ನಾಲ್ಕನೆಯ ದಿನದಂದು ಸಿಂಹವಾಹಿನಿಯಾದ ಚಾಮುಂಡೇಶ್ವರಿ ದೇವಿಯನ್ನು , ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ.ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಎಂಟನೆಯ ದಿನ ದುರ್ಗಾದೇವಿಯನ್ನು ಪೂಜಿಸುವುದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ನವರಾತ್ರಿಯ ಒಂಬತ್ತನೇ ದಿನದಂದು ಜಗನ್ಮಾತೆಯ ಲೋಕಕಂಟಕ ಅಸುರನನ್ನು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ. ಈ ರೀತಿ ಆಶ್ವಯುಜ ಶುದ್ಧ ಪಾಡ್ಯದಿಂದ ನವಮಿಯವರೆಗೆ ಜಗನ್ಮಾತೆಯನ್ನು ಈ ಎಲ್ಲಾ ರೂಪಗಳಲ್ಲಿ ಆರಾಧಿಸಿ ಆಕೆಯ ಅನುಗ್ರಹಕ್ಕೆ ಭಕ್ತರು ಪಾತ್ರರಾಗುತ್ತಾರೆ.