ಪುತ್ತೂರು: ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಇದರ ಅಂಗ ಸಂಸ್ಥೆಯಾದ ಪುತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ವಸಂತ ಆರ್ಯಾಪು , ಕಾರ್ಯದರ್ಶಿಯಾಗಿ ವಿಖ್ಯಾತ್ ಬಳ್ಳಮಜಲು, ಕೋಶಾಧಿಕಾರಿಯಾಗಿ ಜಗದೀಶ್ ಎಲಿಕ, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಕೆ ಪಾಲ್ತಾಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಸಿ. ಎಚ್ ಚಾಕೊಟೆ ಇರ್ದೆ, ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ್ ನಾಯ್ಕ್ ಸೊರಕೆ, ಸಂದೀಪ್ ಆರ್ಯಾಪು, ಗೋಪಾಲ ಪಡುಮಲೆ, ಗಂಗಾಧರ ಕೌಡಿಚ್ಚಾರು, ಕ್ರೀಡಾ ಕಾರ್ಯದರ್ಶಿಗಳಾಗಿ ಯತೀಶ್ ಕೆ.ಎಂ, ಪುಣ್ಚಪ್ಪಾಡಿ ಮತ್ತು ಈಶ್ವರ ಮಿತ್ತಡ್ಕ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯಶಸ್ವಿನಿ ಆಯ್ಕೆಯಾದರು.
ಸದಸ್ಯರಾಗಿ ಗಂಗಾಧರ ಪಾಣಾಜೆ, ವಿಜಯ ಮಠಂತಬೆಟ್ಟು, ಶ್ರೀನಿವಾಸ ಮಠಂತಬೆಟ್ಟು, ವೆಂಕಪ್ಪ ಬರೆಪ್ಪಾಡಿ, ರವೀಶ್ ತಾರಿಗುಡ್ಡೆ, ನವೀನ್ ಎರ್ಕಮೆ, ಸ್ವಾತಿ ಬೊಳಿಂಜ, ಹರ್ಷಿಕಾ ಬಿ.ಟಿ, ಸೌಜನ್ಯ ಬೊಳಿಂಜ, ಪೂರ್ಣಿಮಾ ಲೋಕೇಶ್ , ರಮೇಶ್ ನಿಧಿಮುಂಡ, ಶಿವರಾಜ್ ಕಲ್ಪಣೆ, ಶ್ರೀಧರ ಕಲ್ಪಣೆ, ಹರಿತ್ ನೆಕ್ಕಿಲು, ಸುಮಂತ್ ಸರ್ವೆ, ವಿನೋದ್ ಆರ್ಯಾಪು, ಕಾರ್ತಿಕ್ ಆರ್ಯಾಪು, ನವೀನ್ ಕುಮಾರ್ ಮೈರ, ಅಶೋಕ್ ಎಸ್. ಸೇರ್ತಾಜೆ, ಗಣೇಶ್ ಶುಭಂ ಪರ್ಪುಂಜ, ರಾಮಚಂದ್ರ ನಾಯ್ಕ್ ಕೇಪುಳು ಮತ್ತು ಅಶೋಕ್ ಬಲ್ನಾಡು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.
ವೇದಿಕೆಯಲ್ಲಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ್ ಬಡಾವು, ಕಾರ್ಯದರ್ಶಿ ಶೀನಪ್ಪ ನಾಯ್ಕ , ಕೋಶಾಧಿಕಾರಿ ಮೋಹನ ನಾಯ್ಕ್ ಎಂ ಉಪಸ್ಥಿತರಿದ್ದರು. ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು, ಮರಾಟಿ ಯುವ ವೇದಿಕೆ ಮತ್ತು ಮರಾಟಿ ಮಹಿಳಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮರಾಟಿ ಸಮಾಜ ಬಾಂಧವರು ಉಪಸ್ಥಿತರಿದ್ದರು.