ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರ‍್ಯಾಕ್ಟ್ ಕ್ಲಬ್, ಸ.ಪ್ರ.ದ.ಕಾಲೇಜು ಪುತ್ತೂರು, ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳು ಸಾಲ್ಮರ ಪುತ್ತೂರು ಹಾಗೂ ಎ.ಪಿ.ಎಂ.ಸಿ. ಪುತ್ತೂರು ಹಾಗೂ ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ(PAMA) ಇದರ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಸಾಲ್ಮರ ಮೌಂಟನ್ ವ್ಯೂ ಶಾಲೆಯಿಂದ ಎ.ಪಿ.ಎಂ.ಸಿ. ಮಾರುಕಟ್ಟೆ ಪ್ರಾಂಗಣದ ವರೆಗೆ “ಪರಿಸರ ಸಂರಕ್ಷಣೆ – ಆರೋಗ್ಯ ಸಂವರ್ಧನೆ” ಎಂಬ ಘೋಷ ವಾಕ್ಯದೊಂದಿಗೆ ಜಾಥಾ ಹಾಗೂ ಎ.ಪಿ.ಎಂ.ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಎಮ್.ಸಿ ಪಡಗನೂರು ಜಾಥಾವನ್ನು ಸ್ವಾಗತಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮಹಮ್ಮದ್ ಸಾಹೇಬ್ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ರಾಮಚಂದ್ರ ಮತ್ತು ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ(PAMA) ಅಧ್ಯಕ್ಷ ರವೀಂದ್ರನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಜಯಕುಮಾರ್ ರೈ ಮಿತ್ರಂಪಾಡಿ, ಪುತ್ತೂರು ರೋಟರಿ ಸಿಟಿ ಸದಸ್ಯರಾದ ಗ್ರೇಸಿ ಗಾನ್‌ಸೆಲ್ವ್‌ಸ್, ಲಾರೆನ್ಸ್ ಗೊನ್ಸಾಲ್ವಸ್, ಪದ್ಮನಾಭ, ಗುರುರಾಜ ಹಾಗೂ ವಿದ್ಯಾರ್ಥಿಗಳು, ಅಡಿಕೆ ವರ್ತಕರು ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದರು. ಉಲ್ಲಾಸ್ ಪೈ ವಂದಿಸಿದರು.